ಊಟವಾದ ತಕ್ಷಣ ಸ್ನಾನ ಮಾಡಬೇಡಿ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಏಕೆ ಗೊತ್ತೇ?
ಊಟವಾದ ಕೂಡಲೆ ಸ್ನಾನ ಮಾಡುವುದರಿಂದ ನೀವು ಸೇವಿಸಿದ ಆಹಾರ ಬಹುಬೇಗ ಜೀರ್ಣವಾಗುವುದಿಲ್ಲ. ಹಾಗಾಗಿ ಇದರಿಂದ ಅಜೀರ್ಣದಂಥ ಉದರ ಸಂಬಂಧಿ ಸಮಸ್ಯೆಗಳು ಇದರಿಂದ ಕಾಣಿಸಿಕೊಳ್ಳಬಹುದು.
ಅದೇ ರೀತಿ ಊಟವಾದ ತಕ್ಷಣ ಚಹಾ ಸೇವಿಸದಿರಿ. ಇದರಿಂದ ದೇಹಕ್ಕೆ ಪ್ರೊಟೀನ್ ಅಂಶವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಊಟಕ್ಕೆ ಒಂದು ಗಂಟೆ ಮೊದಲು ಇಲ್ಲವೇ ಊಟವಾದ ಎರಡು ಗಂಟೆ ಬಳಿಕವಷ್ಟೇ ಚಹಾ ಸೇವನೆ ಮಾಡಿ.
ಊಟವಾದ ತಕ್ಷಣ ಹಣ್ಣುಗಳನ್ನು ಸೇವಿಸುವುದು ಕೂಡಾ ಒಳ್ಳೆಯದಲ್ಲ. ಹಣ್ಣುಗಳನ್ನು ಊಟವಾದ ಬಳಿಕ ಸೇವಿಸಿದರೆ ಅವು ಜೀರ್ಣವಾಗುವುದಿಲ್ಲ. ಅದೇ ರೀತಿ ಊಟವಾದ ತಕ್ಷಣ ಧೂಮಪಾನ ಮಾಡುವುದು, ನಿದ್ದೆ ಮಾಡುವುದು ಕೂಡಾ ಒಳ್ಳೆಯದಲ್ಲ.