ರಾಗಿ ರೊಟ್ಟಿ ತಿನ್ನುವವರು ದೀರ್ಘಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ. ಏನಿದರ ಗುಟ್ಟು?
ರಾಗಿಯಲ್ಲಿ ಹಲವು ಬಗೆಯ ವಿಟಮಿನ್ ಹಾಗೂ ಪೋಷಕಾಂಶಗಳಿದ್ದು ಇದು ಹಲವು ವಿಧದ ದೇಹದ ಆನಾರೋಗ್ಯಗಳಿಗೆ ಔಷಧವಾಗಿದೆ. ರಾಗಿ ಸೇವನೆಯಿಂದ ಕೀಲು ನೋವು ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ವಯಸ್ಸಾದವರಿದ್ದರೆ ಅವರಿಗೆ ನಿತ್ಯ ರಾಗಿಯ ಪಾನೀಯ ಇಲ್ಲವೇ ರೊಟ್ಟಿ ತಯಾರಿಸಿ ಸವಿಯಲು ಕೊಡಿ.
ಜೀರ್ಣಕ್ರಿಯೆಯನ್ನೂ ಚುರುಕಾಗಿಸುವ ರಾಗಿಯನ್ನು ಡಯಟ್ ಪ್ಲಾನ್ ಅನುಸರಿಸುವವರು ಸೇವಿಸುವುದು ಬಹಳ ಒಳ್ಳೆಯದು. ಇದರ ಸೇವನೆಯಿಂದ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ದೇಹಕ್ಕೆ ಸಿಗುತ್ತದೆ. ಮೂಳೆಗಳು ಬಲಿಷ್ಠವಾಗುತ್ತವೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಇದು ನೆರವಾಗುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ ರಕ್ತದೊತ್ತಡವನ್ನೂ ನಿಯಂತ್ರಣಕ್ಕೆ ತರುತ್ತದೆ. ಮಧುಮೇಹಿಗಳು ಇದನ್ನು ಸೇವಿಸಿದರೆ ರಕ್ತದ ಸಕ್ಕರೆ ಪ್ರಮಾಣವೂ ನಿಯಂತ್ರಣದಲ್ಲಿ ಇರುತ್ತದೆ ಮಾತ್ರವಲ್ಲ ದಿನವಿಡೀ ನೀವು ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳುತ್ತದೆ.