ಪುದೀನಾ ಸೊಪ್ಪಿನ ಪ್ರಯೋಜನಗಳು ಒಂದೆರಡಲ್ಲ. ಬೇಸಿಗೆಯಲ್ಲಿ ಇದನ್ನು ಕುಡಿಯುವ ನೀರಿನಲ್ಲಿ ಹಾಕಿಟ್ಟರೆ ಸಾಕು, ನೀರು ಪರಿಮಳಯುಕ್ತವಾಗುತ್ತದೆ ಮಾತ್ರವಲ್ಲ, ಎಷ್ಟು ಬಾರಿ ನೀರು ಕುಡಿದರೂ ಬೇಸರ ಎನಿಸುವುದಿಲ್ಲ.
ಪುದೀನಾ ಪೋಷಕಾಂಶಗಳ ಕಣಜವಾಗಿದ್ದು ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮ್ಯಾಂಗನೀಸ್ ಧಾರಾಳವಾಗಿದೆ. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ, ಮೆದುಳಿನ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ.
ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಸೋಂಕು ಸಂಬಂಧಿ ಸಮಸ್ಯೆಗಳು ನಿಮ್ಮ ಕಾಡದಂತೆ ನೋಡಿಕೊಳ್ಳುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿ ಬ್ಯಾಕ್ಟೀರಿಯಾ ಹರಡದಂತೆ ನೋಡಿಕೊಳ್ಳುತ್ತದೆ.
ನಿಯಮಿತವಾಗಿ ಪುದೀನಾ ಸೇವಿಸುವುದರಿಂದ ಉಸಿರಾಟದ ಸಮಸ್ಯೆಯಿಂದ ದೂರವಿರಬಹುದು. ಇದನ್ನು ಬೆರೆಸಿದ ನೀರು ಕುಡಿಯುವುದರಿಂದ ದಿನವಿಡೀ ಫ್ರೆಶ್ ಇರಬಹುದು. ಇದು ತಲೆನೋವನ್ನು ನಿವಾರಿಸಿ ಮಾನಸಿಕ ಖಿನ್ನತೆಯಿಂದ ಮುಕ್ತಿ ನೀಡುತ್ತದೆ.