ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಇದರಲ್ಲಿ ಅತ್ಯಂತ ಆಕರ್ಷಕವಾದ ಸ್ಥಳಗಳಲ್ಲಿ ಇಕ್ಕೇರಿಯ ಅಘೋರೇಶ್ವರ ದೇವಾಲಯ ಕೂಡ ಒಂದು. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿ ಇಕ್ಕೇರಿ ಸಿಗುತ್ತೆ.
ಈ ಇಕ್ಕೇರಿಯು 17ನೇ ಶತಮಾನದಲ್ಲಿ ಆಳಿದ ಕೆಲಾಡಿ ನಾಯಕರ ರಾಜಧಾನಿಯಾಗಿತ್ತು. ಇವರ ಆಡಳಿತದ ಅವಧಿಯಲ್ಲಿ ಈ ದೇವಾಲಯವನ್ನ ನಿರ್ಮಿಸಲಾಯ್ತು.
ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ ಹೊಯ್ಸಳ ಹಾಗೂ ದ್ರಾವಿಡ ಶೈಲಿಯ ಶ್ರೀಮಂತ ವಾಸ್ತುಶಿಲ್ಪವನ್ನ ಹೊಂದಿದೆ. ಇಲ್ಲಿ ಶಿವ, ನಂದಿ, ಗಣೇಶ, ಸುಬ್ರಹ್ಮಣ್ಯ ಹಾಗೂ ಮಹಿಷಾಸುರ ಮರ್ಧಿನಿ ನೆಲೆಸಿದ್ದಾರೆ. ಇಲ್ಲಿರುವ ಕಾಮ ಪ್ರಚೋದಕ ಕೆತ್ತನೆಗಳು ದೇವಾಲಯದ ವಿಶೇಷತೆಗಳಲ್ಲಿ ಒಂದು.
ಸಾಗರ ಪಟ್ಟಣದಿಂದ ಕೇವಲ 6ಕಿಲೋಮೀಟರ್ ದೂರದಲ್ಲೇ ಇಕ್ಕೇರಿ ಇರೋದ್ರಿಂದ ನೀವು ಸುಲಭವಾಗಿ ಇಲ್ಲಿಗೆ ತಲುಪಬಹುದು. ಸಾಗರದಿಂದ ಬಸ್ ಇಲ್ಲವೇ ಆಟೋ ಮಾಡಿಕೊಂಡೇ ನೀವು ಶಿವನ ಸನ್ನಿಧಿಯನ್ನ ತಲುಪಬಹುದು.