alex Certify ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಹಚ್ಚಿ.

*ಮಗುವಿಗೆ ಡ್ರೈಪರ್ ನಿಂದ ಆದ ಅಲರ್ಜಿಯನ್ನು ನಿವಾರಿಸಲು ಟೀ ಟ್ರೀ ಆಯಿಲ್ ತುಂಬಾ ಉತ್ತಮ. ಇದು ಮಕ್ಕಳ ಚರ್ಮದ ಸಮಸ್ಯೆಗಳನ್ನು ದೂರಮಾಡುತ್ತದೆ. ಹಾಗಾಗಿ ನೀರಿಗೆ ಸ್ವಲ್ಪ ಟೀ ಟ್ರೀ ಆಯಿಲ್ ಹಾಕಿ ಅಲರ್ಜಿಯಾದ ಜಾಗಕ್ಕೆ ಹಚ್ಚಿ. ಇದರಿಂದ ಬೇಗ ಗುಣಮುಖವಾಗುತ್ತದೆ.

*ಮಗುವಿನ ಡ್ರೈಪರ್ ಅಲರ್ಜಿಯನ್ನು ನಿವಾರಿಸಲು ತೆಂಗಿನೆಣ್ಣೆಯನ್ನು ಬಳಸಬಹುದು. ತೆಂಗಿನೆಣ್ಣೆಯನ್ನು ಅಲರ್ಜಿಯಾದಲ್ಲಿ ಹಚ್ಚಿದರೆ ಬೇಗ ವಾಸಿಯಾಗುತ್ತದೆ.

*ಇನ್ನು ಅಲೋವೆರಾ ಜೆಲ್ ಕೂಡ ಇದನ್ನು ಬೇಗ ನಿವಾರಿಸುತ್ತದೆ. ಜತೆಗೆ ದದ್ದುಗಳಾಗದಂತೆ ತಡೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...