ನೀವು ನಕ್ಕಾಗ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಹಲ್ಲುಗಳು. ಅವುಗಳೇ ಹಳದಿಗಟ್ಟಿ ನಿಮ್ಮ ಸೌಂದರ್ಯಕ್ಕೆ ಭಂಗ ತರುತ್ತಿವೆಯೇ. ಹಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?
ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ಬೆರಳಿನ ಸಹಾಯದಿಂದ ಇದನ್ನು ನಿಮ್ಮಹಲ್ಲುಗಳ ಮೇಲೆ ಮಸಾಜ್ ಮಾಡಿ. ಹಲ್ಲಿನೊಂದಿಗೆ ವಸಡನ್ನೂ ತಿಕ್ಕಿ. ಹತ್ತು ನಿಮಿಷದ ಬಳಿಕ ಬಾಯಿ ಮುಕ್ಕಳಿಸಿ. ನಿತ್ಯ ಹೀಗೆ ಮಾಡುವುದರಿಂದ ಹಳದಿ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
ಬೇಕಿಂಗ್ ಸೋಡಾ ನಿಮ್ಮ ಹಲ್ಲಿನ ಮೇಲಿನ ಕಲೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಬೇಕಿಂಗ್ ಸೋಡಾಗೆ ನಾಲ್ಕು ಹನಿ ನೀರು ಹಾಕಿ ಕರಗಿಸಿ ಪೇಸ್ಟ್ ತಯಾರಿಸಿ. ಇದನ್ನು ಬ್ರೆಶ್ ಸಹಾಯದಿಂದ ಹಲ್ಲಿನ ಮೇಲೆ ಉಜ್ಜಿ. ಇದರಿಂದಲೂ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
ಬಾಳೆಹಣ್ಣು ಅಥವಾ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಸಿಡ್ ಇದ್ದು ಇದು ನಿಮ್ಮ ಹಳದಿಗಟ್ಟಿದ ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ. ಇದರ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ನಯವಾಗಿ ಸ್ಕ್ರಬ್ ಮಾಡಿ. ಬಳಿಕ ಬಾಯಿಯನ್ನು ತೊಳೆಯಿರಿ. ಇದನ್ನು ನಿತ್ಯ ಪ್ರಯತ್ನಿಸುವುದು ಒಳ್ಳೆಯದೇ.