ಮಕ್ಕಳಿಗೆ ಏನಾದರೂ ಹೊಸ ರುಚಿ ಮಾಡಿಕೊಟ್ಟರೆ ತಿನ್ನುತ್ತಾರೆ. ಇಲ್ಲಿ ಚೀಸ್ ಬಳಸಿಕೊಂಡು ಮಾಡುವ ರುಚಿಯಾದ ಪರೋಟ ಇದೆ. ಮನೆಯಲ್ಲಿ ಟ್ರೈ ಮಾಡಿ.
ಗೋಧಿ ಹಿಟ್ಟು-1 ಕಪ್, ನೀರು-ಅಗತ್ಯವಿರುವಷ್ಟು, ಉಪ್ಪು –ಸ್ವಲ್ಪ, ಕ್ಯಾಪ್ಸಿಕಂ-ಅರ್ಧ ಕಪ್, ತುರಿದ ಚೀಸ್-1/2 ಕಪ್. ಎಣ್ಣೆ- ಸ್ವಲ್ಪ. ಚಿಲ್ಲಿ ಪ್ಲೇಕ್ಸ್-1/2 ಟೀ ಸ್ಪೂನ್.
ಮೊದಲಿಗೆ ಗೋಧಿ ಹಿಟ್ಟಿಗೆ ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಕ್ಯಾಪ್ಸಿಕಂ, ತುರಿದ ಚೀಸ್, ಚಿಲ್ಲಿ ಪ್ಲೇಕ್ಸ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಪಾತಿ ಹಿಟ್ಟಿನಿಂದ ಪರೋಟಕ್ಕೆ ಬೇಕಾಗುವಷ್ಟು ದೊಡ್ಡ ಉಂಡೆ ಕಟ್ಟಿಕೊಂಡು ಲಟ್ಟಿಸಿ. ಇದರ ಮಧ್ಯೆ ಕ್ಯಾಪ್ಸಿಕಂ ಚೀಸ್ ಮಿಶ್ರಣ ಇಟ್ಟು ಮತ್ತೆ ಮಡಚಿಕೊಂಡು ನಿಧಾನಕ್ಕೆ ಲಟ್ಟಿಸಿ. ತುಂಬಾ ತೆಳ್ಳಗೆ ಬೇಡ. ನಂತರ ಪ್ಯಾನ್ ಗೆ ಎಣ್ಣೆ ಸವರಿಕೊಂಡು ಅದಕ್ಕೆ ಈ ಪರೋಟ ಹಾಕಿ ಎರಡೂ ಕಡೆ ಚೆನ್ನಾಗಿ ಕಾಯಿಸಿಕೊಂಡರೆ ರುಚಿಯಾದ ಕ್ಯಾಪ್ಸಿಕಂ ಚೀಸ್ ಪರೋಟ ರೆಡಿ.