ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ದಪ್ಪ ಕೂದಲಿನ ಮಕ್ಕಳಿನ ಅಮ್ಮಂದಿರು ಹೇನಿನ ಸಮಸ್ಯೆ ದೂರ ಮಾಡಲು ಹಲವು ಪ್ರಯೋಗಗಳನ್ನು ಮಾಡಿ ಸೋತಿರುತ್ತಾರೆ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ ಕೇಳಿ.
ತಲೆ ಹೆಚ್ಚು ತೇವವಾಗಿರದಂತೆ ನೋಡಿಕೊಳ್ಳಿ. ಬೇವಿನ ಎಲೆಯನ್ನು ಸ್ವಚ್ಛವಾಗಿ ತೊಳೆದು ಪೇಸ್ಟ್ ಮಾಡಿಕೊಳ್ಳಿ. ಇದನ್ನು ನೆತ್ತಿ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ. ಒಂದರಿಂದ ಎರಡು ಗಂಟೆ ಬಳಿಕ ತಲೆ ತೊಳೆದು ಬಾಚಣಿಗೆಯಿಂದ ಬಾಚಿದರೆ ಹೇನು ತಂತಾನೆ ಉದುರುತ್ತದೆ.
ಟೀಟ್ರೀ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ನೆತ್ತಿ ಹಾಗೂ ಕೂದಲಿನ ತುದಿಗೆ ಹಚ್ಚಿ, ತಲೆಗೆ ಕ್ಯಾಪ್ ಅಥವಾ ವಸ್ತ್ರದ ತುಂಡೊದನ್ನು ಕಟ್ಟಿಕೊಂಡು ಮಲಗಿ. ಮರುದಿನ ಹೇನಿನ ಬಾಚಣಿಗೆಯಿಂದ ಬಾಚಿದರೆ ಹೇನೆಲ್ಲಾ ಉದುರುತ್ತದೆ.
ವಿನೆಗರ್ ಅನ್ನು ತಲೆಗೆ ಹಚ್ಚಿ ಶವರ್ ಕ್ಯಾಪ್ ಧರಿಸಿ. ಅರ್ಧ ಗಂಟೆ ಬಳಿಕ ಬಾಚಿದರೆ ಹೇನಿನೊಂದಿಗೆ ಅದರ ಮೊಟ್ಟೆಗಳೂ ಉದುರುತ್ತವೆ. ಪೆಟ್ರೋಲಿಯಂ ಜೆಲ್ಲಿಯನ್ನೂ ಇದೇ ವಿಧಾನದಲ್ಲಿ ಬಳಸಬಹುದು. ಇದರಿಂದ ಹೆಚ್ಚಿನ ಅಡ್ಡ ಪರಿಣಾಮಗಳಿಲ್ಲ ಎಂಬುದು ವಿಶೇಷ.