ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಹಾಗೇ ಇದರಿಂದ ಕೂದಲು, ಚರ್ಮ, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳೀಬಹುದು ಮಾತ್ರವಲ್ಲ ಇದು ಕೆಲವು ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿಯಾಗಿದೆ.
* ಮನೆಯ ಕಿಟಕಿ ಮತ್ತು ಕನ್ನಡಿಗಳನ್ನು ಸ್ವಚ್ಛಗೊಳಿಸಲು 1 ಕಪ್ ಗ್ರೀನ್ ಟೀ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಕಿಟಕಿ, ಕನ್ನಡಿಯ ಮೇಲೆ ಸಿಂಪಡಿಸಿ ಪೇಪರ್ ನಿಂದ ಸ್ವಚ್ಛಗೊಳಿಸಿ.
* ಕಾಲುಗಳಲ್ಲಿ ವಾಸನೆ ಬರುತ್ತಿದ್ದರೆ, ಮತ್ತು ಕೊಳಕಾಗಿದ್ದರೆ ಅದನ್ನು ಸ್ವಚ್ಛಗೊಳಿಸಲು ನೀರಿಗೆ ಗ್ರೀನ್ ಟೀಯನ್ನು ಸೇರಿಸಿ ಕುದಿಸಿ ಆ ನೀರಿನಲ್ಲಿ ಕಾಲನ್ನು 15 ನಿಮಿಷ ನೆನೆಸಿಟ್ಟುಕೊಳ್ಳಿ. ಬಳಿಕ ವಾಶ್ ಮಾಡಿದರೆ ಕಾಲುಗಳು ಸ್ವಚ್ಛವಾಗುತ್ತದೆ.