ಕವುಚಿ ಅಥವಾ ಬೋರಲು ಮಲಗುವುದು ನಿಮಗೆ ಹಿತ ಎನಿಸಬಹುದು. ಆದರೆ ಇದನ್ನೇ ಅಭ್ಯಾಸವಾಗಿ ಮಾಡಿಕೊಳ್ಳಬೇಡಿ. ನಿಮ್ಮ ದೇಹದ ಮೇಲೆ ಇದು ಬೀರುವ ದುಷ್ಪರಿಣಾಮಗಳು ಹಲವು.
ಹೀಗೆ ಕವುಚಿ ಮಲಗುವುದರಿಂದ ಕೀಲು ಮತ್ತು ಬೆನ್ನಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಈ ಭಾಗದಲ್ಲಿ ಕ್ರಮೇಣ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮಗೆ ಆರಾಮದಾಯಕವಾದ ನಿದ್ದೆಯೂ ಬರುವುದಿಲ್ಲ.
ಇಂಥ ಸಂದರ್ಭದಲ್ಲಿ ಕತ್ತು ವಾರೆಯಾಗುವುದರಿಂದ ತಲೆಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ಬೆಳಿಗ್ಗೆ ಎದ್ದಾಕ್ಷಣ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ.
ಬೋರಲು ಮಲಗುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ ಉದರ ಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತದೆ.