ದಿನವಿಡೀ ನೀರು ಕುಡಿಯುತ್ತಿರುವುದು ಬಹಳ ಒಳ್ಳೆಯದು ಎಂಬುದನ್ನು ನಾವು ಹಲವು ಬಾರಿ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಅದರಲ್ಲೂ ಬೆಚ್ಚಗಿನ ನೀರು ಕುಡಿಯುವುದರಿಂದ ಹಲವು ಲಾಭಗಳಿವೆ ಎಂಬುದನ್ನೂ ತಿಳಿದಿದ್ದೇವೆ.
ಆದರೆ ಊಟಕ್ಕೆ ಮುನ್ನ ಹಾಗೂ ಊಟವಾದ ಬಳಿಕ ಬಿಸಿನೀರು ಕುಡಿಯುವುದು ಒಳ್ಳೆಯದಲ್ಲ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವ ದ್ರವವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ತೊಂದರೆಯುಂಟು ಮಾಡುತ್ತದೆ ಎನ್ನಲಾಗಿದೆ.
ಊಟದ ಬಳಿಕ ನೀರು ಕುಡಿಯುವುದರಿಂದಲೂ ಜೀರ್ಣಕ್ರಿಯೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ನೀರನ್ನು ಊಟವಾದ ತಕ್ಷಣ ಕುಡಿಯುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಕನಿಷ್ಠ ಒಂದು ಗಂಟೆ ಬಳಿಕ ನೀರು ಕುಡಿಯಬೇಕು ಎನ್ನಲಾಗಿದೆ.
ಊಟದ ವೇಳೆ ನೀರು ಕುಡಿಯುವುದರಿಂದ ಆಹಾರ ಮೆತ್ತಗಾಗುತ್ತದೆ ಮಾತ್ರವಲ್ಲ ಬಹುಬೇಗ ಕರಗುತ್ತದೆ. ಹೆಚ್ಚು ಮಸಾಲೆ ಇರುವ ವಸ್ತುಗಳನ್ನು ಸೇವಿಸುವಾಗ ನೀರು ಕುಡಿಯುವುದು ಬಹಳ ಒಳ್ಳೆಯದು ಎನ್ನಲಾಗಿದೆ.