alex Certify ಮುಖದ ಸೌಂದರ್ಯ ಹೆಚ್ಚಿಸುತ್ತೆ ಮೊಟ್ಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಸೌಂದರ್ಯ ಹೆಚ್ಚಿಸುತ್ತೆ ಮೊಟ್ಟೆ

ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ, ಅದರಿಂದ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಬಹುದು. ಹಾಗಾದ್ರೆ ಮೊಟ್ಟೆಯನ್ನು ಬಳಸಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ.

*ಮುಖದ ಮೇಲಿರುವ ಅನಗತ್ಯ ಕೂದಲನ್ನು ನಿವಾರಿಸಲು ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ ಅದರ ಮೇಲೆ ಟಿಶ್ಯು ಪೇಪರ್ ನ್ನು ಅಂಟಿಸಿ. ಸಂಪೂರ್ಣವಾಗಿ ಒಣಗಿದ ಬಳಿಕ ಪೇಪರನ್ನು ತೆಗೆಯಿರಿ. ಇದರಿಂದ ಮುಖದಲ್ಲಿವ ಕೂದಲು ಕಿತ್ತಬರುತ್ತದೆ.

*ಸುಕ್ಕುಗಳನ್ನು ನಿವಾರಿಸಲು 2 ಚಮಚ ಅಕ್ಕಿ ಪುಡಿ, 1 ಚಮಚ ಬಾದಾಮಿ ಪುಡಿ, ಮೊಟ್ಟೆಯ ಹಳದಿ ಭಾಗ, ನಿಂಬೆರಸ ಇವಿಷ್ಟನ್ನು ಬೆರೆಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ವಾಶ್ ಮಾಡಿ. ಇದನ್ನು ನಿಯಮಿತವಾಗಿ ಮಾಡಿದರೆ ಸುಕ್ಕುಗಳು ನಿವಾರಣೆಯಾಗುತ್ತದೆ.

*ಮುಖದಲ್ಲಿ ಮೂಡಿದ ರಂಧ್ರಗಳನ್ನು ನಿವಾರಿಸಲು ಮೊಟ್ಟೆಯ ಬಿಳಿಭಾಗ 1 ಚಮಚ, ನಿಂಬೆ ರಸ 1 ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ತೆರೆದ ರಂಧ್ರಗಳು ಬಿಗಿಗೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...