ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಈ ರೀತಿ ಕಾಳಜಿ ವಹಿಸಿ.

ಬೀಚ್ ಗೆ ಹೋಗುವ 20 ನಿಮಿಷಗಳ ಮೊದಲು ಚರ್ಮಕ್ಕೆ ಸನ್ ಸ್ಕ್ರೀನ್ ಅನ್ನು ಹಚ್ಚಿ. ಇದರಿಂದ ಬಿಸಿಲಿನಿಂದಾಗುವ ಹಾನಿಯನ್ನು ತಪ್ಪಿಸಬಹುದು. ಹಾಗೇ ಬೀಚ್ ನಿಂದ ಮರಳಿದ ಬಳಿಕ ಹಾಲಿನಿಂದ ಮುಖವನ್ನು ವಾಶ್ ಮಾಡಿ ಮಾಯಿಶ್ಚರೈಸರ್ ಹಚ್ಚಿ. ಹಾಗೇ ಸಮಯವಿದ್ದರೆ ಫೇಸ್ ಪ್ಯಾಕ್ ಅನ್ನು ಕೂಡ ಮುಖಕ್ಕೆ ಬಳಸಬಹುದು.

 ಅಲ್ಲದೇ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಸಮುದ್ರದ ನೀರಿನಲ್ಲಿ ಈಜುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಹಾಗಾಗಿ ಕೂದಲನ್ನು ಕ್ಯಾಪ್ ನಿಂದ ಕವರ್ ಮಾಡಿ. ಮನೆ ತಲುಪಿದ ಬಳಿಕ ಕೂದಲನ್ನು ಗಿಡಮೂಲಿಕೆ ಶಾಂಪೂ ಬಳಸಿ ವಾಶ್ ಮಾಡಿ. ಕೂದಲಿನ ಹೊಳಪನ್ನು ಹೆಚ್ಚಿಸಲು ನಿಂಬೆ ರಸವನ್ನು ಸ್ಪ್ರೇ ಮಾಡಿ. ಸಮಯವಿದ್ದರೆ ಹೇರ್ ಪ್ಯಾಕ್ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read