alex Certify ಆರೋಗ್ಯಕ್ಕೆ ತುಂಬಾ ಉತ್ತಮ ʼಅತ್ತಿ ಹಣ್ಣುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ತುಂಬಾ ಉತ್ತಮ ʼಅತ್ತಿ ಹಣ್ಣುʼ

ಅತ್ತಿ ಹಣ್ಣಿನ ಔಷಧಿಯ ಗುಣಗಳು – Rising Kannada

ಸಾಮಾನ್ಯವಾಗಿ ಅತ್ತಿ ಮರಗಳು ಹಳ್ಳಿಗಳಲ್ಲಿ ಕಂಡುಬರುತ್ತದೆ. ಹಿಂದೂಧರ್ಮದಲ್ಲಿ ಇದರಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಈ ಅತ್ತಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಬಹುದು.

*ಅತ್ತಿ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಕಂಡುಬರುವ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

*ಇದನ್ನು ಸೇವಿಸುವುದರಿಂದ ಹೃದಯ ಸಮಸ್ಯೆಯಿಂದ ದೂರವಿರಬಹುದು. ಇದರಲ್ಲಿರುವ ಅಂಶ ಅಪಧಮನಿ ಮತ್ತು ಅಭಿದಮನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

 *ಇದು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತದೆ. ಅತ್ತಿ ಮರದಿಂದ ತೆಗೆದ ರಸವನ್ನು ಔಷಧಿಯಾಗಿ ಸೇವಿಸಿದರೆ ಕ್ಯಾನ್ಸರ್ ಕೋಶಗಳು ನಾಶವಾಗುತ್ತದೆ.

*ಈ ಮರದ ತೊಗಟೆಯಿಂದ ಕಷಾಯ ತಯಾರಿಸಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಉತ್ತಮ ಔಷಧವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...