ಹೆಚ್ಚಾಗಿ ನಾವು ಒಣಗಿದ ಬಾದಾಮಿಯನ್ನು ಸೇವಿಸುತ್ತೇವೆ. ಇದು ದೇಹಕ್ಕೆ ಬಹಳ ಉತ್ತಮವೆಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಹಸಿರು ಬಾದಾಮಿ ಒಣಗಿದ ಬಾದಾಮಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆಯಂತೆ. ಇದು ದೇಹದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆಯಂತೆ.
* ಹಸಿರು ಬಾದಾಮಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಹೆಚ್ಚು ನಾರಿನಾಂಶವನ್ನು ಒಳಗೊಂಡಿದ್ದು ಇದರ ಸೇವನೆಯಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಇದು ಜೀರ್ಣಕ್ರಿಯೆಯನ್ನು ಸರಾಗವಾಗಿ ಮಾಡುತ್ತದೆ.
* ಇದು ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಫೈಬರ್ ಹೆಚ್ಚಾಗಿರುವ ಹಸಿರು ಬಾದಾಮಿ ಬೊಜ್ಜು ಕಡಿಮೆ ಮಾಡುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ.
* ಇದರ ಸೇವನೆಯಿಂದ ಚರ್ಮ ಮತ್ತು ಕೂದಲನ್ನು ಬಲಪಡಿಸುತ್ತದೆ. ಮೊಡವೆ ಮತ್ತು ಚರ್ಮದ ಹಾನಿಯನ್ನು ತಪ್ಪಿಸಲು ದಿನಕ್ಕೆ ನಾಲ್ಕರಿಂದ ಐದು ಹಸಿರು ಬಾದಾಮಿ ಸೇವಿಸಿ.