ಕೆಲವು ಮಹಿಳೆಯರು ಗರ್ಭ ಕಂಠದ (Cervical Problem) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಗರ್ಭಾವಸ್ಥೆಯಲ್ಲಿ ಅವರಿಗೆ ಗರ್ಭಪಾತವಾಗುವ ಸಂಭವವಿರುತ್ತದೆ. ಇಲ್ಲವಾದರೆ ಅವಧಿಗೂ ಮೊದಲೇ ಮಗು ಜನಿಸುತ್ತದೆ. ಹಾಗಾಗಿ ಈ ಗರ್ಭಕಂಠದ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ.
*ಉಸ್ತ್ರಾಸನ : ನೆಲದ ಮೇಲೆ ಮಂಡಿಯೂರಿ ಬಳಿಕ ನಿಮ್ಮ ಬೆನ್ನನ್ನು ಹಿಂದಕ್ಕೆ ಭಾಗಿಸಿ ನಿಮ್ಮ ಕೈಗಳಿಂದ ನಿಮ್ಮ ಕಾಲುಗಳನ್ನು ಹಿಡಿದುಕೊಳ್ಳಿ. 30 ಸೆಕೆಂಡುಗಳ ಕಾಲ ಹೀಗೆ ಮಾಡಿ.
*ಹಸ್ತ ಉತ್ತಾನಾಸನ : ನೆಲದ ಮೇಲೆ ನಿಂತುಕೊಂಡು ನಿಮ್ಮ ಎರಡು ಕೈಗಳನ್ನು ಮೇಲಕ್ಕೆತ್ತಿ. ನಿಮ್ಮ ಕೈಗಳನ್ನು ಹಿಂದಕ್ಕೆ ಬಾಗಿಸಿ. ನಿಮ್ಮ ಕಣ್ಣುಗಳನ್ನು ತೆರೆದಿಡಿ. ನಿಮ್ಮ ತಲೆಯನ್ನು ನಿಮ್ಮ ತೋಳುಗಳ ನಡುವೆ ಇರಿಸಿ, ಮೊಣಕಾಲನ್ನು ಬಾಗಿಸಬೇಡಿ.