ವಾಯುಮಾಲಿನ್ಯದಿಂದಾಗಿ ಜನರು ಉಸಿರಾಟದಲ್ಲಿ ಸಮಸ್ಯೆ ಕಂಡುಬಂದು ಅಸ್ತಮಾ, ನ್ಯುಮೋನಿಯಾದಂತಹ ದೀರ್ಘಕಾಲದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಗಿಡಮೂಲಿಕೆ ಚಹಾವನ್ನು ಸೇವಿಸಿ.
ಈ ಟೀ ತಯಾರಿಸಲು ದಾಲ್ಚಿನ್ನಿ, ಕರಿಮೆಣಸು, ಏಲಕ್ಕಿ, ತುಳಸಿ ಎಲೆಗಳು, ಸೊಂಪು, ಶುಂಠಿ ಮತ್ತು ಸೆಲರಿ ಇವೆಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಸೇರಿಸಿ ಕುದಿಸಿದರೆ ಟೀ ರೆಡಿಯಾಗುತ್ತದೆ. ಇದನ್ನು ಸೋಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ದಿನಕ್ಕೆ ಒಂದೇ ಬಾರಿ ಬಳಸಿ.
ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಶ್ವಾಸಕೋಶದ ವಾಯುನಾಳವನ್ನು ಸರಾಗಗೊಳಿಸಿ ಸುಲಭವಾಗಿ ಉಸಿರಾಡಲು ಸಹಕರಿಸುತ್ತದೆ. ಶ್ವಾಸಕೋಶದಲ್ಲಿ ಸೇರಿಕೊಂಡ ಕಫವನ್ನು ಹೊರಹಾಕುತ್ತದೆ. ಅಸ್ತಮಾ, ನ್ಯುಮೋನಿಯಾದಂತಹ ಸಮಸ್ಯೆ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.