HomeBeautyಕೂದಲು ಉದುರಿ ತೆಳುವಾಗಿದೆಯಾ......? ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲು ಉದುರಿ ತೆಳುವಾಗಿದೆಯಾ……? ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ ಎಣ್ಣೆಯನ್ನು ತಯಾರಿಸಿ.

2 ಚಮಚ ಮೆಂತ್ಯಕಾಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹರಳೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಬೆರೆಸಿ ಸೂರ್ಯನ ಬಿಸಿಲಿನಲ್ಲಿ 2-3 ವಾರಗಳ ತನಕ ಇಡಿ. ಇಲ್ಲವಾದರೆ ಮೆಂತ್ಯ ಪುಡಿ ಮತ್ತು ಎಣ್ಣೆಯ ಮಿಶ್ರಣವನ್ನು ಡಬಲ್ ಬಾಯ್ಲಿಂಗ್ ವಿಧಾನದಲ್ಲಿ ಬಿಸಿ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.

ಈ ಎಣ್ಣೆಯನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಇದನ್ನು ನಿಯಮಿತವಾಗಿ ಬಳಸಿದರೆ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular