ರೋಸ್ ವಾಟರ್ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಮುಖಕ್ಕೆ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ಖರೀದಿಸುವಾಗ ಶುದ್ಧವಾಗಿರುವುದನ್ನು ಖರೀದಿಸಿ.
ಇಲ್ಲವಾದರೆ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ರೋಸ್ ವಾಟರ್ ಶುದ್ಧವಾಗಿದೆಯೇ ಎಂಬುದನ್ನು ಈ ರೀತಿ ಪರೀಕ್ಷಿಸಿ.
*ಶುದ್ಧವಾಗಿರುವ ರೋಸ್ ವಾಟರ್ ಪಾರದರ್ಶಕವಾಗಿರುತ್ತದೆ. ಆದರೆ ಗುಲಾಬಿ ಮತ್ತು ಹಳದಿ ಬಣ್ಣವಿದ್ದರೆ ಅದು ಕೃತಕವಾಗಿದೆ ಎಂದರ್ಥ.
*ರೋಸ್ ವಾಟರ್ ಖರೀದಿಸುವಾಗ ಪ್ಯಾಕೆಟ್ ಮೇಲಿನ ಪದಾರ್ಥಗಳನ್ನು ಪರೀಕ್ಷಿಸಿ. ರೋಸ್ ವಾಟರ್ ನೈಸರ್ಗಿಕವಾಗಿದೆ ಮತ್ತು ಬೇರೆ ಯಾವುದೇ ರಾಸಾಯನಿಕದಿಂದ ಮುಕ್ತವಾಗಿದೆ ಎಂದು ಬರೆದಿದ್ದಾರೆಯೇ ಎಂಬುದನ್ನು ಪರೀಕ್ಷಿಸಿ.