ಕಣ್ಣುಗಳು ಸುಂದರವಾಗಿ ಕಾಣಲು ತಪ್ಪದೇ ಪ್ರತಿದಿನ ಈ 3 ಕೆಲಸ ಮಾಡಿ

ಹೆಚ್ಚಿನವರು ಮುಖವನ್ನು ನೋಡುವಾಗ ಮೊದಲು ನೋಡುವುದು ಕಣ್ಣುಗಳನ್ನು. ಹಾಗಾಗಿ ನಿಮ್ಮ ಕಣ್ಣುಗಳು ಯಾವಾಗಲೂ ಸುಂದರವಾಗಿ ಕಾಣಬೇಕು. ಕಣ್ಣುಗಳಲ್ಲಿ ಊತ, ಸುಕ್ಕುಗಳು ಇರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿದಿನ ತಪ್ಪದೇ ಈ ಕೆಲಸಗಳನ್ನು ಮಾಡಿ.

*ಪ್ರತಿದಿನ ಕಣ್ಣಿನ ಆರೋಗ್ಯವನ್ನು ಕಾಪಾಡುವಂತಹ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ವಿಟಮಿನ್ ಸಿ, ಇ, ಎ, ಸತು ಇವು ನಾಲ್ಕು ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದರೆ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಕ್ಯಾರೆಟ್, ಪಪ್ಪಾಯಿ, ಬಾದಾಮಿ, ಮೊಸರು ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಿ.

*ಕಣ್ಣುಗಳ ಸುತ್ತಲೂ ವಿಟಮಿನ್ ಇ ಎಣ್ಣೆ, ತೆಂಗಿನೆಣ್ಣೆ ಮುಂತಾದ ಆಯಿಲ್ ನಿಂದ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಸರಾಗವಾಗಿ ಆಗಿ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ.

*ನಿದ್ರೆಯಿಂದ ಕಣ್ಣಿಗೆ ಹೆಚ್ಚು ವಿಶ್ರಾಂತಿ ಸಿಗುತ್ತದೆ. ಹಾಗಾಗಿ ದಿನದಲ್ಲಿ 6-8 ಗಂಟೆಗಳ ಕಾಲ ನಿದ್ರೆ ಮಾಡಿ. ಇದು ಕಣ್ಣಿನ ಸಮಸ್ಯೆಯನ್ನು ದೂರ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read