
ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ ಮಾಡಿ ಕೊಡಬಹುದು.
ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಪ್ರಮಾಣ ಸಾಕಷ್ಟಿದೆ. ಇದು ದೇಹದಲ್ಲಿ ಬಹುಬೇಗ ಜೀರ್ಣವಾಗುವುದಿಲ್ಲ.
ಅವುಗಳು ದೇಹದಿಂದ ಬಹುಬೇಗ ದೂರವಾಗುವುದೂ ಇಲ್ಲ, ಮೂತ್ರಪಿಂಡದಲ್ಲಿ ಸ್ಟೋನ್ ಗಳಾಗಿ ರೂಪುಗೊಳ್ಳುತ್ತವೆ.
ಟೊಮೆಟೊದಲ್ಲಿರುವ ಬ್ಯಾಕ್ಟೀರಿಯಾ ಕೆಲವೊಮ್ಮೆ ಅತಿಸಾರವನ್ನುಂಟು ಮಾಡುತ್ತದೆ. ಜೀರ್ಣ ಸಂಬಂಧಿ ಸಮಸ್ಯೆಗಳು ಇರುವವರು ಇದನ್ನು ನಿತ್ಯ ಸೇವಿಸದೇ ಇರುವುದು ಒಳ್ಳೆಯದು.
ಇನ್ನು ಇದನ್ನು ನಿತ್ಯ ಸೇವಿಸುವುದರಿಂದ ರಕ್ತದಲ್ಲಿ ಲೈಕೋಪೀನ್ ಪ್ರಮಾಣ ಹೆಚ್ಚಿ ತ್ವಚೆಯ ಬಣ್ಣ ಬದಲಾಗುತ್ತದೆ. ಈ ಸಮಸ್ಯೆ ಯಾವಾಗಲೂ ಕಾಡದಿದ್ದರೂ, ಕೆಲವರಿಗೆ ತೀವ್ರ ತೆರನಾದ ಸಮಸ್ಯೆಗಳನ್ನು ಉಂಟು ಮಾಡಬಹುದು.