ಒಂದೊಳ್ಳೆ ಉದ್ಯೋಗದಲ್ಲಿರಬೇಕು. ಕೈ ತುಂಬಾ ಸಂಬಳ ಬರಬೇಕು ಅನ್ನೋ ಕನಸು ಯಾರಿಗಿರೊಲ್ಲ ಹೇಳಿ. ಆದರೆ ಕೆಲವೊಮ್ಮೆ ಎಲ್ಲಾ ಸರಿ ಇದ್ದರೂ ನಮ್ಮ ಅದೃಷ್ಟ ಕೈ ಕೊಡೋದ್ರಿಂದ ಉದ್ಯೋಗ ಸಿಗೋದೇ ಇಲ್ಲ. ನೀವು ಕೂಡ ಇದೇ ಕಷ್ಟದಲ್ಲಿ ಇದ್ದರೆ ದೇವರಲ್ಲಿ ಈ ರೀತಿ ಪ್ರಾರ್ಥನೆ ಸಲ್ಲಿಸಿದ್ರೆ ನಿಮ್ಮ ಕಷ್ಟ ಖಂಡಿತವಾಗಿಯೂ ದೂರಾಗಲಿದೆ.
ಆಂಜನೇಯ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ಹೋಗಿ. ಯಾವದಾದರೊಂದು ಮಂಗಳವಾರದಿಂದ ಮುಂದಿನ 40 ದಿನಗಳವರೆಗೂ ತಪ್ಪದೆ ನೀವು ಈ ಕ್ರಮವನ್ನ ಅನುಸರಿಸಬೇಕು. ಇದಕ್ಕೆ ಇಂತಹದ್ದೇ ಸಮಯ ಬೇಕು ಎಂದೇನಿಲ್ಲ. ಬರಿಗಾಲಲ್ಲಿ ದೇವಸ್ಥಾನಕ್ಕೆ ಹೋಗಿ ಆಂಜನೇಯನಿಗೆ ಕೆಂಪು ಹೂಗಳನ್ನ ಅರ್ಪಿಸಿ ಹಾಗೂ ಪ್ರಾರ್ಥನೆ ಸಲ್ಲಿಸಿ. ಈ ರೀತಿ ಮಾಡೋದ್ರಿಂದ ಖಂಡಿತವಾಗಿಯೂ ಆಂಜನೇಯನ ಅನುಗ್ರಹ ನಿಮ್ಮದಾಗಲಿದೆ.