HomeLatest Newsಹೊಳೆಯುವ ತ್ವಚೆ ಪಡೆಯಲು ಮನೆಯಲ್ಲಿಯಲ್ಲಿಯೇ ತಯಾರಿಸಿ ಕಿತ್ತಳೆ ಸಿಪ್ಪೆ ಸೋಪ್

ಹೊಳೆಯುವ ತ್ವಚೆ ಪಡೆಯಲು ಮನೆಯಲ್ಲಿಯಲ್ಲಿಯೇ ತಯಾರಿಸಿ ಕಿತ್ತಳೆ ಸಿಪ್ಪೆ ಸೋಪ್

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಚರ್ಮದ ಸೌಂದರ್ಯ ಹೆಚ್ಚಿಸಲು ಹೆಚ್ಚಾಗಿ ಬಳಸುತ್ತಾರೆ. ಹಾಗೇ ಇದರ ಸಿಪ್ಪೆಯೂ ಕೂಡ ಚರ್ಮಕ್ಕೆ ತುಂಬಾ ಉಪಯೋಗಕಾರಿಯಾಗಿದೆ. ಹಾಗಾಗಿ ಕಿತ್ತಳೆಯ ಸಿಪ್ಪೆಯಿಂದ ಸೋಪ್ ತಯಾರಿಸಿ ಮುಖಕ್ಕೆ ಬಳಸಿದರೆ ಸೌಂದರ್ಯ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಈ ಸೋಪ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಒಂದು ಪಾತ್ರೆಯಲ್ಲಿ ಸೋಪ್ ಬೆಸ್ ಸ್ವಲ್ಪ ತೆಗೆದುಕೊಂಡು ಅದನ್ನು ಕತ್ತರಿಸಿಕೊಂಡು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ. ಅದು ಸಂಪೂರ್ಣವಾಗಿ ಕರಗಿದ ಬಳಿಕ ಅದಕ್ಕೆ 1 ಚಮಚ ಕಿತ್ತಳೆ ಸಿಪ್ಪೆ ಪುಡಿ, ವಿಟಮಿನ್ ಇ ಎಣ್ಣೆ ಮತ್ತು ಕೆಲವು ಹನಿ ನಿಂಬೆ ಎಸೆನ್ಷಿಯಲ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸೋಪ್ ಅಚ್ಚಿಗೆ ಸುರಿಯಿರಿ.

1 ಗಂಟೆ ತಣ್ಣಗಾಗಲು ಬಿಡಿ. ಆಗ ಸೋಪ್ ರೆಡಿ ಆಗುತ್ತದೆ. ಈ ಸೋಪ್ ನಿಂದ ಪ್ರತಿದಿನ ಮುಖ ವಾಶ್ ಮಾಡುವುದರಿಂದ ಮೊಡವೆಗಳು, ಕಪ್ಪು ಕಲೆಗಳು ಮುಂತದ ಸೌಂದರ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular