ತುಳಸಿಯನ್ನು ಹಿಂದೂಧರ್ಮದಲ್ಲಿ ಅತ್ಯಂತ ಶುಭವೆಂದು ನಂಬಲಾಗಿದೆ. ಹಾಗೆ ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಇದರಿಂದ ಆರೋಗ್ಯವನ್ನು ವೃದ್ಧಿಪಡಿಸಬಹುದು. ಹಾಗಾಗಿ ಆಯುರ್ವೇದದ ಚಿಕಿತ್ಸೆಗಳಲ್ಲಿಯೂ ಇದನ್ನು ಬಳಸುತ್ತಾರೆ. ಆದರೆ ಇದರಿಂದ ಉಪಯೋಗಗಳ ಜೊತೆಗೆ ಕೆಲವು ಅಡ್ಡಪರಿಣಾಮಗಳು ಕಂಡು ಬರುತ್ತದೆ. ಅವು ಯಾವುದೆಂಬುದನ್ನು ತಿಳಿಯೋಣ.
ಉಪಯೋಗಗಳು :
*ಕಫ ಇದ್ದಾಗ ತುಳಸಿ ಎಲೆ ಸೇವಿಸಿದರೆ ಅದರಿಂದ ಕಫ ನಿವಾರಣೆಯಾಗುತ್ತದೆ. ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್ ಗುಣಗಳಿವೆ, ಇದು ಜ್ವರ ಮತ್ತು ಶೀತದಿಂದ ಕೂಡ ಮುಕ್ತಿ ನೀಡುತ್ತದೆ.
*ಕೂದಲು ವಯಸ್ಸಾಗುವ ಮೊದಲೇ ಬೆಳ್ಳಗಾಗುತ್ತಿದ್ದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 8-10 ತುಳಸಿ ಎಲೆಗಳನ್ನು ಅಗೆದು ತಿನ್ನಬೇಕು. ಇದರಿಂದ ಕೂದಲು ಬೆಳ್ಳಗಾಗುವುದು ನಿಲ್ಲುತ್ತದೆ.
ಅಡ್ಡಪರಿಣಾಮಗಳು :
*ನಿಮಗೆ ಆಮ್ಲೀಯತೆ ಸಮಸ್ಯೆ ಇದ್ದರೆ ತುಳಸಿಯನ್ನು ಸೇವಿಸಬೇಡಿ. ಯಾಕೆಂದರೆ ತುಳಸಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮತ್ತೊಂದು ಸಮಸ್ಯೆ ಕಾಡಬಹುದು.
*ಕೂದಲು ಹೆಚ್ಚು ಉದುರುತ್ತಿರುವವರು ತುಳಸಿಯನ್ನು ಸೇವಿಸಬೇಡಿ. ಇದರಿಂದ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ.