ಶೌಚಾಲಯದಲ್ಲಿ ತುಂಬಾ ಹೊತ್ತು ಕುಳಿತರು ಮಲ ಸರಿಯಾಗಿ ವಿಸರ್ಜನೆಯಾಗದೆ ಹೊಟ್ಟೆ ಕ್ಲೀನ್ ಆಗುವುದಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯಲ್ಲಿ ವಿಷ ಸಂಗ್ರಹಣೆಯಾಗುತ್ತದೆ. ಹಾಗಾಗಿ ಹೊಟ್ಟೆಯನ್ನು ಕ್ಲೀನ್ ಆಗಿಸಲು ಪ್ರತಿದಿನ ಇವುಗಳನ್ನು ಸೇವಿಸಿ.
* ನೀರು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗಾಗಿ ನಿಮ್ಮ ಹೊಟ್ಟೆ ಚೆನ್ನಾಗಿ ಕ್ಲೀನ್ ಆಗಲು ಪ್ರತಿದಿನ 8-10 ಗ್ಲಾಸ್ ನೀರನ್ನು ಕುಡಿಯಬೇಕು. ಇದರಿಂದ ಮಲ ಸರಿಯಾಗಿ ವಿಸರ್ಜನೆಯಾಗುತ್ತದೆ.
* ಬೆಳ್ಳುಳ್ಳಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಮಲವನ್ನು ಮೃದುಗೊಳಿಸಿ ಸುಲಭವಾಗಿ ವಿಸರ್ಜನೆಯಾಗುವಂತೆ ಮಾಡುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಹುರಿದು ಅಥವಾ ಹಸಿಯಾಗಿ ಸೇವಿಸಿ.
* ಆಪಲ್ ಸೈಡರ್ ವಿನೆಗರ್ ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡುತ್ತದೆ. ಹಾಗಾಗಿ ಪ್ರತಿದಿನ 2 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ½ ಕಪ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಸೇವಿಸಿ.