ಮಹಿಳೆಯರು ಮೇಕಪ್ ಇಲ್ಲದೆ ಹೊರಗೆ ಹೋಗುವುದಿಲ್ಲ. ಮೇಕಪ್ ಮುಖದಲ್ಲಿರುವ ಸಮಸ್ಯೆಗಳು ಮರೆಮಾಚುತ್ತದೆ. ಹಾಗಾಗಿ ಮಹಿಳೆಯರು ಪ್ರತಿಬಾರಿ ಹೊರಗೆ ಹೋಗುವಾಗ ಮೇಕಪ್ ಮಾಡುತ್ತಾರೆ. ಮೇಕಪ್ ಇಲ್ಲದೇ ನಾವು ಅಂದವಾಗಿ ಕಾಣುವುದಿಲ್ಲ ಎಂಬುದು ಅವರ ಭಾವನೆ. ಆದರೆ ಮೇಕಪ್ ಇಲ್ಲದೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ.
*ಹೊರಗೆ ಬರುವ 15 ನಿಮಿಷಕ್ಕೆ ಮೊದಲು ನೀವು ಯಾವಾಗಲೂ ಸನ್ ಸ್ಕ್ರೀನ್ ಅನ್ನು ಮುಖ, ಕೈಗೆ ಹಚ್ಚಿ.
*ನಿಮ್ಮ ಮುಖದ ತ್ವಚೆ ಮೃದುವಾಗಿ, ಕೋಮಲವಾಗಿ ಹೊಳೆಯುತ್ತಿರಲು ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿ.
*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಸೇವಿಸಿ. ಇದು ದೇಹದ ವಿಷವನ್ನು ಹೊರಹಾಕುತ್ತದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
*ಚರ್ಮದ ಸತ್ತ ಜೀವಕೋಶಗಳನ್ನು ತೊಡೆದು ಹಾಕಲು ವಾರದಲ್ಲಿ ಒಂದು ಬಾರಿ ಮುಖಕ್ಕೆ ಸ್ಕ್ರಬ್ ಬಳಸಿ.
*ಪ್ರತಿದಿನ ಮುಖಕ್ಕೆ ಟೋನರ್ ನ್ನು ಬಳಸಿ. ಇದು ಚರ್ಮದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
*ಚರ್ಮವನ್ನು ಹೈಡ್ರೀಕರಿಸಿ. ಅದಕ್ಕಾಗಿ ಪ್ರತಿದಿನ ಸರಿಯಾಗಿ ನೀರನ್ನು ಕುಡಿಯಿರಿ.