ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಶ್ವಾನಗಳು, ಮಾಲೀಕನ ಪ್ರಾಣವನ್ನ ಉಳಿಸೋಕಾಗಿ ಈ ಶ್ವಾನಗಳು ತಮ್ಮ ಜೀವ ಕೊಡೋಕೂ ತಯಾರಿರ್ತಾವೆ. ಆದರೆ ಈ ಶ್ವಾನಗಳು ಮನೆ ಕಾಯೋದ್ರ ಜೊತೆಗೆ ಮನೆಯಲ್ಲಿ ಮುಂದೆ ನಡೆಯುವ ಘಟನೆ ಬಗ್ಗೆ ಸೂಚನೆಯನ್ನೂ ನೀಡುತ್ತೆ. ಅವುಗಳ ಚಟುವಟಿಕೆಗಳ ಮೂಲಕವೇ ಮನೆಯಲ್ಲಿ ಮುಂದೆ ನಡೆಯುವ ಘಟನೆಗಳ ಬಗ್ಗೆ ಸೂಚನೆ ಸಿಗತ್ತೆ ಎಂದು ಶಕುನ ಶಾಸ್ತ್ರ ಹೇಳಿದೆ.
ನೀವು ಸಾಕಿದ ಶ್ವಾನ ತನ್ನ ಎಡ ಮಂಡಿಯನ್ನ ಮೂಸಿಕೊಳ್ಳುತ್ತಿದೆ ಎಂದರೆ ನಿಮಗೆ ಹಣದ ಆಗಮನವಾಗುವ ಸಾಧ್ಯತೆ ಇದೆ. ಅದೇ ನಾಯಿ ಬಲಗಡೆ ಮಂಡಿಯನ್ನ ಮೂಸುತ್ತಿದ್ದರೆ ಪತ್ನಿಯ ಜೊತೆ ಜಗಳ ಆಗುವ ಸಾಧ್ಯತೆ ಜೋರಿದೆ.
ಮಾಲೀಕ ತಿಂಡಿ ತಿನ್ನುವ ವೇಳೆ ನಾಯಿ ತಲೆಯನ್ನ ಅಲ್ಲಾಡಿಸುತ್ತಾ ಬಾಲವನ್ನೂ ಅಲ್ಲಾಡಿಸಿದ್ರೆ ಆ ಆಹಾರವನ್ನ ತ್ಯಜಿಸೋದೇ ಒಳ್ಳೆಯದು. ಯಾಕಂದ್ರೆ ಅದರಿಂದ ವ್ಯಕ್ತಿ ಅಸ್ವಸ್ಥನಾಗುವ ಸಾಧ್ಯತೆ ಇದೆ. ಯಾವುದಾದರೂ ಪ್ರಯಾಣಿಕನ ಎದುರು ನಾಯಿ ಬೊಗಳುತ್ತಿದ್ದರೆ ಆತ ಸಧ್ಯದಲ್ಲೇ ಹಣ ಕಳೆದುಕೊಳ್ಳಲಿದ್ದಾನೆ ಎಂದರ್ಥ. ನಾಯಿ ಪದೇ ಪದೇ ತನ್ನ ತಲೆಯನ್ನ ನೆಲಕ್ಕೆ ಹಾಕಿ ತಿಕ್ಕುತ್ತಿದ್ದರೆ ಆ ಜಾಗದಲ್ಲಿ ನಿಧಿ ಇರುವ ಸಾಧ್ಯತೆ ಇದೆ.
ಎಲ್ಲಿಯಾದರೂ ಪ್ರಯಾಣ ಮಾಡುವ ವೇಳೆ ತಿಂಡಿ ಕಚ್ಚಿಕ್ಕೊಂಡು ಬರುತ್ತಿರುವ ನಾಯಿ ಎದುರಾದರೆ ಆ ವ್ಯಕ್ತಿಗೆ ಧನಲಾಭವಾಗಲಿದೆ ಎಂದು ಅರ್ಥವಂತೆ.