ಕೈಗಳ ಸುಕ್ಕು ಕಡಿಮೆ ಮಾಡಲು ಪಾಲಿಸಿ ಈ ಸಲಹೆ

ಮುಖದ ಚರ್ಮದ ಬಗ್ಗೆ ಎಷ್ಟು ಗಮನಹರಿಸುತ್ತೇವೋ ಹಾಗೇ ಕೈಗಳ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಕೈಗಳಲ್ಲು ಸುಕ್ಕುಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಕೈಗಳ ಸುಕ್ಕುಗಳನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ಪಾಲಿಸಿ.

*ಕೈಗಳ ಚರ್ಮ ಒಣಗಲು ಮುಖ್ಯ ಕಾರಣ ನಿರ್ಜಲೀಕರಣ. ನೀರು ಸರಿಯಾಗಿ ಕುಡಿಯದಿದ್ದರೆ ಕೈಗಳ ಚರ್ಮ ಒಣಗಿ ಸುಕ್ಕುಗಟ್ಟುತ್ತದೆ. ಹಾಗಾಗಿ ಸರಿಯಾದ ಪ್ರಮಾಣದ ನೀರನ್ನು ಸೇವಿಸಿ.

*ಹೆಚ್ಚಿನವರು ಸೂರ್ಯ ಕಿರಣಗಳಿಂದ ಮುಖದ ಚರ್ಮವನ್ನು ರಕ್ಷಿಸಲು ಮುಖಕ್ಕೆ ಮಾತ್ರ ಸನ್ ಸ್ಕ್ರೀನ್ ನ್ನು ಹಚ್ಚುತ್ತಾರೆ. ಕೈಗಳು ಹೆಚ್ಚಾಗಿ ಸೂರ್ಯ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಕೈಗಳಿಗೂ ಕೂಡ ಸನ್ ಸ್ಕ್ರೀನ್ ಹಚ್ಚಿ.

*ಕೈಗಳ ತೇವಾಂಶವನ್ನು ಕಾಪಾಡಿ. ಹಾಗಾಗಿ ಆಗಾಗ ಕೈಗಳಿಂದ ಮಾಯಿಶ್ಚರೈಸರ್, ಎಣ್ಣೆಗಳನ್ನು ಹಚ್ಚುತ್ತೀರಿ. ಇದರಿಂದ ಕೈಗಳ ತೇವಾಂಶ ಹೆಚ್ಚಾಗಿ ಸುಕ್ಕುಗಳು ಕಡಿಮೆಯಾಗುತ್ತದೆ.

*ಕೈಗಳನ್ನು ಆಗಾಗ ಸ್ಯಾನಿಟೈಸರ್, ಸೋಪುಗಳನ್ನು ಬಳಸಿ ತೊಳೆಯುತ್ತಿರಬೇಡಿ, ಇದರಿಂದ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಹಾಗಾಗಿ ಕೈಗಳನ್ನು ಬರಿ ನೀರಿನಲ್ಲಿ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read