ಚಳಿಗಾಲದಲ್ಲಿ ನಮ್ಮ ಚರ್ಮದ ಆರೈಕೆಯನ್ನ ಹೇಗೆ ಮಾಡಿಕೊಳ್ಳುತ್ತೇವೋ ಅದರಂತೆಯೇ ಸಾಕು ಪ್ರಾಣಿಗಳ ಆರೈಕೆ ಮಾಡೋದೂ ಅಷ್ಟೇ ಮುಖ್ಯ.
ನಿಮ್ಮ ಮುದ್ದಿನ ಪ್ರಾಣಿಗಳನ್ನ ಆದಷ್ಟು ದಪ್ಪನೆಯ ಬಟ್ಟೆಗಳಿಂದ ಬೆಚ್ಚಗಿಡಿ. ಇದರ ಜೊತೆಯಲ್ಲಿ ಅವುಗಳ ಆಹಾರ ಕ್ರಮದಲ್ಲೂ ನೀವು ಅನೇಕ ಬದಲಾವಣೆಗಳನ್ನ ತರೋದು ಅವಶ್ಯಕ.
ಚಳಿಗಾಲದಲ್ಲಿ ಪ್ರಾಣಿಗಳ ಮಾಲೀಕರು ಮಾಡಬೇಕಾದ ಮುಖ್ಯವಾದ ಕೆಲಸ ಅಂದರೆ ಅವುಗಳನ್ನ ಬೆಚ್ಚಗಿಡೋದು. ಅವಕ್ಕೆ ಹೊಂದುವಂತಹ ಬಟ್ಟೆಗಳನ್ನ ನೀವು ಆನ್ಲೈನ್ ಮಾರುಕಟ್ಟೆ ಇಲ್ಲವೇ ಶಾಪ್ಗಳಲ್ಲಿ ಖರೀದಿ ಮಾಡಬಹುದು. ಇಲ್ಲವೇ ನೀವೇ ಅವಕ್ಕೆ ಬೆಚ್ಚನೆಯ ಬಟ್ಟೆಗಳನ್ನ ಹೊಲಿದುಕೊಡಲೂ ಬಹುದು.
ಚಳಿಗಾಲದಲ್ಲಿ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಚರ್ಮದ ಸಮಸ್ಯೆ ಉಂಟಾಗುತ್ತೆ. ಹೀಗಾಗಿ ಅವುಗಳ ಕೂದಲು ಹಾಗೂ ಚರ್ಮದ ಆರೋಗ್ಯದ ಕಡೆ ಆದಷ್ಟು ಗಮನ ಕೊಡಿ. ಪ್ರಾಣಿಗಳಿಗೂ ನೀವು ಕೊಬ್ಬರಿ ಎಣ್ಣೆ, ಆಲ್ಮಂಡ್ ಎಣ್ಣೆಗಳನ್ನ ಬಳಕೆ ಮಾಡಬಹುದು.
ಚಳಿಗಾಲದಲ್ಲಿ ಪ್ರಾಣಿಗಳು ಮನೆಯ ಹೊರಗೆ ಹಾಗೂ ಒಳಗಡೆ ಬೆಚ್ಚಗೆ ಇರಲು ಬಯಸುತ್ತವೆ. ಹೀಗಾಗಿ ಅವಕ್ಕೆ ಬೆಚ್ಚನೆಯ ಹಾಸಿಗೆಯನ್ನ ಮಾಡಿಕೊಡಿ. ಅಲ್ಲದೇ ಅವಕ್ಕೆ ಬೆಚ್ಚನೆಯ ಚಿಕನ್ ಸೂಪ್ ಹಾಗೂ ಡಾಗ್ಫುಡ್, ಕ್ಯಾರೆಟ್, ಅನ್ನವನ್ನ ಬೇಯಿಸಿ ತಿನ್ನಲು ನೀಡಿ. ಅಲ್ಲದೇ ಅವುಗಳ ಆಹಾರ ಕ್ರಮದಲ್ಲಿ ಶುದ್ಧನೆಯ ನೀರನ್ನ ಕೊಡೋಕೆ ಮರೆಯದಿರಿ.
ಚಳಿಗಾಲದಲ್ಲಿ ಆಗಾಗ್ಗೆ ಪ್ರಾಣಿ ವೈದ್ಯರನ್ನ ಭೇಟಿಯಾಗಿ. ನಿಯಮಿತವಾಗಿ ಪ್ರಾಣಿಗಳ ಆರೋಗ್ಯವನ್ನ ತಪಾಸಣೆ ಮಾಡಿಸಿ. ಇದೆಲ್ಲದರ ಜೊತೆ ಬೀದಿ ನಾಯಿಗಳ ಆರೋಗ್ಯದ ಕಡೆಗೂ ಗಮನ ನೀಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.