HomeHealthಪ್ರತಿನಿತ್ಯ ‌ʼಅಂಜೂರʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ.....!

ಪ್ರತಿನಿತ್ಯ ‌ʼಅಂಜೂರʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ…..!

ಅಂಜೂರ ಹಣ್ಣು ಬಲು ದುಬಾರಿ ಎಂಬುದೇನೊ ನಿಜ. ಆದರೆ ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ನಾರಿನಂಶ ಹೇರಳವಾಗಿರುವ ಅಂಜೂರದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಒಣ ಅಥವಾ ಹಸಿ ಅಂಜೂರ ಸೇವನೆಯಿಂದ ನೀವು ಈ ಪ್ರಯೋಜನ ಪಡೆದುಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಫ ಕರಗಿಸಿ, ಕೆಮ್ಮು ದೂರ ಮಾಡುವ ಅಂಜೂರಕ್ಕೆ ದೇಹ ತೂಕ ಕಡಿಮೆ ಮಾಡುವ ಶಕ್ತಿಯೂ ಇದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ನೆರವಾಗುವ ಅಂಜೂರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಅಂಶವಿದೆ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುವವರು ಅಂಜೂರ ಸೇವಿಸಿದರೆ ಬಹಳ ಒಳ್ಳೆಯದು. ಅಂಜೂರವನ್ನು ಒಂದು ಗಂಟೆ ಹೊತ್ತು ಹಾಲಿನಲ್ಲಿ ನೆನೆಸಿಟ್ಟು ರುಬ್ಬಿ ಎರಡು ಹನಿ ಬಾದಾಮಿ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಕಲೆ ಸಮಸ್ಯೆ ದೂರವಾಗಿ ಮುಖ ಹೊಳಪು ಪಡೆದುಕೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular