ನಿಮ್ಮ ಕಣ್ಣುಗಳನ್ನು ಆಕರ್ಷಕವಾಗಿಡುವ ಕೆಲವು ಟಿಪ್ಸ್ ಗಳ ಬಗ್ಗೆ ತಿಳಿಯೋಣ ಬನ್ನಿ.
ನಿತ್ಯ ಮಲಗುವ ಮುನ್ನ ನಿಮ್ಮ ಕಣ್ಣಿನ ರೆಪ್ಪೆಯ ಕೂದಲಿಗೆ ಹರಳೆಣ್ಣೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಆಕರ್ಷಕವಾಗಿ ಕಾಣಿಸುತ್ತದೆ. ಕಣ್ಣಿನ ಕೆಳಭಾಗದ ಕಪ್ಪು ವರ್ತುಲ ನಿವಾರಣೆಗೂ ಇದನ್ನು ಬಳಸಬಹುದು.
ಲೋಳೆಸರದ ಒಳಭಾಗಕ್ಕೆ ತೆಂಗಿನೆಣ್ಣೆ ಬೆರೆಸಿ ಕಣ್ಣ ರೆಪ್ಪೆಗೆ ಹಚ್ಚಿಕೊಂಡರೆ ಕಣ್ಣ ರೆಪ್ಪೆ ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ. ಕಣ್ಣಿನ ತುದಿಗೆ ಬೆರಳಿನಿಂದ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತಸಂಚಾರ ಹೆಚ್ಚುತ್ತದೆ. ಕಣ್ಣುಗಳ ಆಕರ್ಷಕವಾಗಿ ಕಾಣುತ್ತದೆ.
ರೋಸ್ ವಾಟರ್ ಬಳಕೆಯಿಂದಲೂ ಕಣ್ಣುಗಳು ಆಕರ್ಷಣೆ ಪಡೆದುಕೊಳ್ಳುತ್ತವೆ. ಸೌತೆಕಾಯಿ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದ ಟೊಮೆಟೊ ರಸಕ್ಕೆ ನಿಂಬೆ ಮತ್ತು ಚಿಟಿಕೆ ಅರಶಿನ ಬೆರೆಸಿ ಲೇಪಿಸುವುದರಿಂದ ಕಣ್ಣಿನ ಆಸುಪಾಸಿನ ಕಲೆಗಳನ್ನು ದೂರ ಮಾಡಿ ಆಕರ್ಷಕ ಕಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಕಣ್ಣು ಊದಿದಂತೆ ಕಂಡು ಬಂದರೆ ಸೌತೆಕಾಯಿ ರಸಕ್ಕೆ ಎರಡು ಹನಿ ತುಳಸೀ ರಸ ಬೆರೆಸಿ ಹಚ್ಚಿಕೊಳ್ಳಿ. ಇದರಿಂದ ಕಣ್ಣ ಕೆಳಗಿನ ನೆರಿಗೆಯೂ ಮಾಯವಾಗುತ್ತದೆ.