ಬೆಳ್ಳಿ ಕಾಲ್ಗೆಜ್ಜೆ ನಿಮ್ಮ ಫೇವರಿಟ್ಟೇ, ಅದರೆ ಓಲ್ಡ್ ಸ್ಟೈಲ್ ಎಂಬ ಕಾರಣಕ್ಕೆ ಅದನ್ನು ಬಳಸದೆ ಬದಿಗಿಟ್ಟಿದ್ದೀರೇ? ಈಗ ಬಂದಿರುವ ಹೊಸ ವಿನ್ಯಾಸಗಳು ಖಂಡಿತಾ ನಿಮಗೆ ಇಷ್ಟವಾಗುತ್ತವೆ.
ಕಾಲ್ಗೆಜ್ಜೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎನ್ನುತ್ತಾರೆ ಹಿರಿಯರು. ಹಾಗಾಗಿ ಹಿಂದಿನಿಂದಲೂ ಪ್ರತಿಯೊಬ್ಬರೂ ಅದನ್ನು ಧರಿಸುತ್ತಿದ್ದರು. ಇದನ್ನು ನಿತ್ಯ ಕಾಲಿಗೆ ಕಟ್ಟಿಕೊಳ್ಳುವುದರಿಂದ ಹಲವು ಆರೋಗ್ಯದ ಪ್ರಯೋಜನಗಳೂ ಇವೆ. ಇದು ಮೈಯ ಹೆಚ್ಚುವರಿ ಉಷ್ಣವನ್ನು ಹೀರಿಕೊಂಡು ದೇಹವನ್ನು ತಂಪಾಗಿಡುತ್ತದೆ ಎನ್ನಲಾಗಿದೆ.
ಗೆಜ್ಜೆಯ ಸದ್ದಿಗೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಮನೆಯಲ್ಲಿ ಹಬ್ಬದ ಸಂಭ್ರಮ ತಂದು ಕೊಡುವ ಗೆಜ್ಜೆ ಧರಿಸುವುದರಿಂದ ಮನೆಯಲ್ಲಿ ನೆಮ್ಮದಿ ತುಂಬುತ್ತದೆ.
ಇಂದು ಹಲವು ವಿನ್ಯಾಸದ ಬೆಳ್ಳಿಯ ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕಪ್ಪು ಬಣ್ಣದ ದಾರ ಹೊಂದಿರುವ ಗೆಜ್ಜೆಯನ್ನು ದೃಷ್ಟಿಗೆಂದು ಒಂದು ಕಾಲಿಗೆ ಕಟ್ಟಿಕೊಳ್ಳುವುದು ಇಂದಿನ ಫ್ಯಾಶನ್ ಆಗಿದೆ. ಹೀಗಾಗಿ ಕಾಲ್ಗೆಜ್ಜೆ ಬೇರೆಯದೇ ಅದ ರೂಪದಲ್ಲಿ ಮಹಿಳೆಯರ ಕಾಲನ್ನು ಅಲಂಕರಿಸಿದೆ.