ತಲೆ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡುವುದರ ಮೂಲಕ, ಶ್ಯಾಂಪೂವಿನಿಂದ ತೊಳೆದುಕೊಳ್ಳುವ ಮೂಲಕ, ಉತ್ತಮ ಬಾಚಣಿಗೆಯಿಂದ ಬಾಚುವ ಮೂಲಕ ಆರೈಕೆ ಮಾಡುತ್ತೀರಿ. ಕೊಳೆ ತುಂಬಿದ ಬಾಚಣಿಗೆಯಿಂದ ತಲೆ ಬಾಚುವುದರಿಂದ ಕೂದಲು ಅರ್ಧದಲ್ಲೇ ತುಂಡಾಗುವ ಸಾಧ್ಯತೆ ಇದೆ. ತಲೆ ಹೊಟ್ಟು ಹೆಚ್ಚಲೂ ಇದೇ ಕಾರಣವಾಗಬಹುದು. ಬಾಚಣಿಗೆ ಸ್ವಚ್ಛ ಇಲ್ಲವೆಂದರೆ ಅನೇಕ ಸಮಸ್ಯೆಗಳು ಉಂಟಾಗುತ್ತೆ ಆದ್ದರಿಂದ ನಿಮ್ಮ ಬಾಚಣಿಗೆಯನ್ನು ಈ ರೀತಿ ಸ್ವಚ್ಛಗೊಳಿಸಿ. ಇದನ್ನು ಕನಿಷ್ಠ ವಾರಕ್ಕೊಮ್ಮೆ ಸ್ವಚ್ಛ ಮಾಡುವುದು ಬಹಳ ಮುಖ್ಯ.
ಬಾಚಣಿಗೆ ಸ್ವಚ್ಛ ಮಾಡುವ ಮೊದಲು ಅದರ ಹಲ್ಲುಗಳ ಮಧ್ಯೆ ಸಿಲುಕಿರುವ ಕೂದಲುಗಳನ್ನು ತೆಗೆದುಕೊಳ್ಳಿ. ಬಳಿಕ ಬಳಸಿ ಎಸೆಯಲು ಇಟ್ಟ ಟೂತ್ ಬ್ರಶ್ ತೆಗೆದುಕೊಳ್ಳಿ. ಅದಕ್ಕೆ ಸೋಪು ಹಚ್ಚಿ. ಬಾಚಣಿಗೆಯನ್ನು ಮೇಲಿಂದ ಕೆಳಕ್ಕೆ ಉಜ್ಜಿ. ನಾಲ್ಕಾರು ಬಾರಿ ಇದನ್ನೇ ಪುನರಾವರ್ತಿಸಿ.
ನಳ್ಳಿಯ ಕೆಳಗೆ ಹಿಡಿಯಿರಿ. ಜೋರಾಗಿ ನೀರು ಬೀಳುವಾಗ ಬಾಚಣಿಗೆ ಸ್ವಚ್ಛವಾಗುತ್ತದೆ. ಇಲ್ಲವಾದರೆ ಮತ್ತೆ ಸೋಪು ಹಚ್ಚಿ ಬ್ರಶ್ ನಿಂದ ತಿಕ್ಕಿ. ಇಲ್ಲವೇ ಸೋಪು ನೀರಿನಲ್ಲಿ ನೆನೆಹಾಕಿ. ಅರ್ಧ ಗಂಟೆ ಬಳಿಕ ಸ್ವಚ್ಛಗೊಳಿಸಿ. ಬಳಿಕ ನೀರು ಸಂಪೂರ್ಣ ಹೋಗುವ ತನಕ ಬಿಸಿಲಿನಲ್ಲಿ ಒಣಗಲು ಇಡಿ.