ತಲೆ ಹೆಚ್ಚು ಹೊತ್ತು ಒದ್ದೆಯಾಗಿ ಇರುವುದರಿಂದ, ತೊಳೆದಾಗ ಕೊಳೆ ಹೋಗದೆ ಉಳಿಯುವುದರಿಂದ ತಲೆಯನ್ನು ಹೇನು ಮತ್ತು ಸೀರುಗಳ ಉತ್ಪತ್ತಿಯಾಗುತ್ತದೆ. ಇವುಗಳ ನಿವಾರಣೆಗೆ ಹೀಗೆ ಮಾಡಿ…
ಹೊಂಗೆ ಮರದ ಎಣ್ಣೆಯನ್ನು ಕೂದಲಿಗೆ ಹಚ್ಚಿ ರಾತ್ರಿ ತಲೆಗೆ ಬಟ್ಟೆ ಕಟ್ಟಿ ಮಲಗಿ. ಬೆಳಿಗ್ಗೆ ಎದ್ದು ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ.
ಸೀಗೆ ಕಾಯಿಯನ್ನು ತಂದಿಟ್ಟು ಪುಡಿ ಮಾಡಿಟ್ಟುಕೊಳ್ಳಿ. ಹೇನು ಹೆಚ್ಚಾದಾಗ ಅದನ್ನು ತಲೆಗೆ ಹಾಕಿ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ. ಚೆನ್ನಾಗಿ ತೊಳೆದು ಒಣಗಿದ ಬಳಿಕ ಹೇನು ಬಾಚುವ ಬಾಚಣಿಗೆಯಿಂದ ಬಾಚಿದರೆ ಹೇನುಗಳೆಲ್ಲಾ ಉದುರುತ್ತವೆ.
ವಾರಕ್ಕೆ ಮೂರರಿಂದ ನಾಲ್ಕು ಬಾರಿ ತಲೆಗೆ ಸ್ನಾನ ಮಾಡುವುದರಿಂದ ಹೇನುಗಳು ಬರದಂತೆ ತಡೆಯಬಹುದು. ಸ್ನಾನ ಮಾಡಿದಾಕ್ಷಣ ಕೂದಲು ಒಣಗಿಸಿದರೆ ಸೀರುಗಳು ಕಾಣಿಸಿಕೊಳ್ಳವು.