HomeHealthʼಥೈರಾಯ್ಡ್ʼ ಸಮಸ್ಯೆ ಸುಧಾರಿಸುವ ತರಕಾರಿಗಳಿವು

ʼಥೈರಾಯ್ಡ್ʼ ಸಮಸ್ಯೆ ಸುಧಾರಿಸುವ ತರಕಾರಿಗಳಿವು

ವಯಸ್ಸು 40 ದಾಟಿದ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳುವ, ಕೆಲವೊಮ್ಮೆ ಎಳವೆಯಲ್ಲೇ ಕಾಡುವ ಸಮಸ್ಯೆಗಳಲ್ಲಿ ಥೈರಾಯ್ಡ್ ಕೂಡಾ ಒಂದು. ಇದು ಹಲವು ಅನಾರೋಗ್ಯದ ಲಕ್ಷಣಗಳನ್ನು ಹೊತ್ತೇ ಬರುತ್ತದೆ.

ಈ ಕೆಲವು ತರಕಾರಿಗಳನ್ನು ಸೇವಿಸುವ ಮೂಲಕ ನೀವು ಥೈರಾಯ್ಡ್ ನ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಬೀಟ್ ರೂಟ್ ಅವುಗಳಲ್ಲೊಂದು. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹಕ್ಕೆ ಅಗತ್ಯವಾಗಿ ಬೇಕಾಗುವ ನಾರಿನಂಶ ಇದರಲ್ಲಿದೆ.

ಹಿಮೋಗ್ಲೋಬಿನ್ ಕಡಿಮೆ ಇರುವವರೂ ಬೀಟ್ ರೂಟ್ ಸೇವಿಸುವುದು ಒಳ್ಳೆಯದು. ಇದು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೈನಾಪಲ್ ಹಣ್ಣು ಕೂಡಾ ಥೈರಾಯ್ಡ್ ಸಮಸ್ಯೆಗೆ ಮದ್ದಾಗಬಲ್ಲದು. ಇದರಲ್ಲಿ ವಿಟಮಿನ್ ಕೆ, ಎ ಮತ್ತು ಸಮೃದ್ಧ ಕ್ಯಾಲ್ಸಿಯಂ ಇದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಇದು ನೆರವಾಗುತ್ತದೆ.

ಆ್ಯಪಲ್, ಪಾಲಕ್ ಸೊಪ್ಪು, ಹಾಲು, ತುಪ್ಪ, ಮೊಸರು ಮತ್ತು ಒಮೆಗಾ ತ್ರಿ ಇರುವ ಆಹಾರವನ್ನು ಸೇವಿಸುವುದರಿಂದ ಥೈರಾಯ್ಡ್ ಲಕ್ಷಣಗಳು ಕಡಿಮೆಯಾಗುತ್ತವೆ. ಇದರ ಹೊರತಾಗಿ ವೈದ್ಯರು ನೀಡುವ ಔಷಧ ಸೇವನೆ ಕಡ್ಡಾಯ ಎಂಬುದು ನೆನಪಿರಲಿ.

For Latest News Updates, Join Our Whatsapp Community🚩
RELATED ARTICLES

Most Popular