alex Certify ಬೇಯಿಸಿದ ಮೊಟ್ಟೆ, ಆಮ್ಲೇಟ್​: ಯಾವುದು ಆರೋಗ್ಯಕ್ಕೆ ಉತ್ತಮ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಯಿಸಿದ ಮೊಟ್ಟೆ, ಆಮ್ಲೇಟ್​: ಯಾವುದು ಆರೋಗ್ಯಕ್ಕೆ ಉತ್ತಮ ಗೊತ್ತಾ…..?

ಮೊಟ್ಟೆಯನ್ನ ಬಳಸಿ ತರಹೇವಾರಿ ಅಡುಗೆಗಳನ್ನ ತಯಾರು ಮಾಡಬಹುದು. ಇದು ಕೂಡ ಡಯಟರಿ ಫುಡ್​ ಆಗಿರೋದ್ರಿಂದ ಸ್ಟಾರ್​ ಸೆಲೆಬ್ರೆಟಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆಯನ್ನ ಬಳಕೆ ಮಾಡೇ ಮಾಡ್ತಾರೆ, ಇದರಲ್ಲಿ ಬೇಯಿಸಿದ ಮೊಟ್ಟೆ ಹಾಗೂ ಆಮ್ಲೆಟ್​ ಬಹಳ ಪ್ರಸಿದ್ಧ.

ಆದರೆ ಮೊಟ್ಟೆಯನ್ನ ಯಾವ ರೂಪದಲ್ಲಿ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಆಮ್ಲೆಟ್​ ಮಾಡಬೇಕು ಅಂದರೆ ಅಡುಗೆ ಎಣ್ಣೆಯನ್ನ ಬಳಕೆ ಮಾಡಲೇಬೇಕಾಗುತ್ತೆ. ಇದು ನಿಮ್ಮ ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದರ ಜೊತೆಯಲ್ಲಿ ಉಪ್ಪು ಹಾಗೂ ಮಸಾಲಾ ಪದಾರ್ಥಗಳು ರುಚಿಯನ್ನ ಬದಲಾಯಿಸೋದ್ರ ಜೊತೆಗೆ ಪೌಷ್ಟಿಕಾಂಶದ ಮೌಲ್ಯವನ್ನ ಹೆಚ್ಚಿಸಲಿದೆ.

ಇನ್ನು ಬೇಯಿಸಿದ ಮೊಟ್ಟೆಗಳಲ್ಲಿ ಪ್ರೋಟಿನ್​ ಹೇರಳವಾಗಿ ಇರಲಿದೆ. ಇದರಲ್ಲಿ ಯಾವುದೇ ಎಣ್ಣೆಯನ್ನ ಬಳಕೆ ಮಾಡದ ಕಾರಣ ಇದರಲ್ಲಿ ಕ್ಯಾಲೋರಿ ಮೌಲ್ಯ ಕಡಿಮೆ ಇರಲಿದೆ. ಹೀಗಾಗಿ ಮೊಟ್ಟೆಯ ಇತರೆ ಯಾವುದೇ ಖಾದ್ಯಗಳಿಗೆ ಹೋಲಿಸಿದ್ರೆ ಬೇಯಿಸಿದ ಮೊಟ್ಟೆ ಅತ್ಯಂತ ಆರೋಗ್ಯಕಾರಿ ಎನ್ನುತ್ತಾರೆ ಆಹಾರ ತಜ್ಞರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...