ನೀವು ಸೌಂದರ್ಯ ಪ್ರಿಯರಾಗಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಯಾವ ಗಿಡ ಇಲ್ಲದಿದ್ದರೂ ಚಿಂತೆಯಿಲ್ಲ, ಅಲೊವೆರಾ ಗಿಡವನ್ನು ಮರೆಯದೆ ನೆಟ್ಟು ಬೆಳೆಸಿ. ಇದರಿಂದ ಹಲವು ವಿಧದ ಲಾಭಗಳನ್ನು ನೀವು ಪಡೆಯಬಹುದು.
ಅಲೊವೆರಾ ರಸವನ್ನು ತೆಗೆದು ನಿತ್ಯ ತ್ವಚೆಗೆ ಹಚ್ಚಿಕೊಳ್ಳುವುದರಿಂದ ತ್ವಚೆ ಬಿರುಕು ಬಿಡುವ ಸಮಸ್ಯೆ ದೂರವಾಗಿ ತ್ವಚೆಯ ತೇವಾಂಶ ಹೆಚ್ಚುತ್ತದೆ. ಇದು ನೈಸರ್ಗಿಕ ಮಾಯಿಸ್ಚರೈಸರ್ ಆಗಿ ಕೆಲಸ ಮಾಡುತ್ತದೆ.
ನಿಮ್ಮ ವಯಸ್ಸನ್ನು ಮರೆಮಾಚುವ ಇದನ್ನು ಆಂಟಿ ಏಜಿಂಗ್ ಆಗಿಯೂ ಬಳಸಬಹುದು. ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲವನ್ನು ದೂರಮಾಡಿ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ. ಸನ್ ಬರ್ನ್ ಅನ್ನೂ ತಡೆಗಟ್ಟುತ್ತದೆ.
ಹೆರಿಗೆ ಬಳಿಕ ಹೊಟ್ಟೆಯ ಭಾಗದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಯನ್ನು ದೂರಮಾಡಿ ನಿಮಗೆ ಚಿರಯೌವನವನ್ನು ಹಿಂದಿರುಗಿಸುತ್ತದೆ. ಸುಟ್ಟಿರುವ ಕಲೆಯನ್ನೂ ಇದು ತೆಗೆದು ಹಾಕುತ್ತದೆ.
ಕೂದಲಿನ ಬುಡಕ್ಕೆ ಅಲೊವೆರಾ ರಸದಿಂದ ಮಸಾಜ್ ಮಾಡುತ್ತಾ ಬಂದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಹೊಟ್ಟು ಸಮಸ್ಯೆ ನಿವಾರಣೆಗೂ ಇದು ಬಹೂಪಕಾರಿ. ಒಡೆದ ಹಿಮ್ಮಡಿ ಸಮಸ್ಯೆಯನ್ನೂ ಇದು ನಿವಾರಿಸಬಲ್ಲದು.