ಬೆಳಗಿನ ಚುಮುಚುಮು ಚಳಿಯಲ್ಲಿ ನಡುಗುತ್ತಾ ಇರುವ ಹೊತ್ತಲ್ಲಿ ಬಿಸಿಬಿಸಿಯಾದ ಶುಂಠಿ ಚಹಾ ಕುಡಿಯುವುದೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ..? ಅದರೆ ನೆನಪಿರಲಿ. ಅತಿಯಾದ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ ಎನ್ನುತ್ತದೆ ಸಂಶೋಧನೆ.
ಶುಂಠಿ ಸೇವನೆ ಹೆಚ್ಚುವುದರಿಂದ ದೇಹದ ಉಷ್ಣತೆಯೂ ಹೆಚ್ಚುತ್ತದೆ. ಇದರಿಂದ ಬಾಯಿಯಲ್ಲಿ ಬೊಕ್ಕೆ, ಮುಖದಲ್ಲಿ ಮೊಡವೆಯಂಥ ಸಮಸ್ಯೆಗಳು ಕಾಣಿಸಿಕೊಂಡಾವು. ಇನ್ನು ಕೆಲವರಿಗೆ ದೇಹದ ಉಷ್ಣತೆ ಹೆಚ್ಚಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇನ್ನು ರಕ್ತದೊತ್ತಡ ಕಡಿಮೆ ಇರುವವರು ಶುಂಠಿ ಚಹಾದಿಂದ ದೂರವಿರುವುದೇ ಒಳ್ಳೆಯದು. ಇದರ ಅತಿಯಾದ ಸೇವನೆಯಿಂದ ತಲೆ ತಿರುಗುವುದು ಮಾತ್ರವಲ್ಲ ರಕ್ತದೊತ್ತಡದ ಪ್ರಮಾಣ ಮತ್ತಷ್ಟು ಕಡಿಮೆಯಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಹೊಟ್ಟೆ ಉರಿ ಹೆಚ್ಚಿಸುವ ಇದರಿಂದ ಕೂದಲು ಉದುರುವುದೂ ಹೆಚ್ಚಬಹುದು. ಹಾಗಾಗಿ ದಿನಕ್ಕೆ ಒಂದು ಬಾರಿ ಇದನ್ನು ಕುಡಿದರೆ ಸಾಕು.
ಶುಂಠಿ ಆಹಾರವನ್ನು ಬಹುಬೇಗ ಜೀರ್ಣ ಮಾಡುತ್ತದೆ. ಮತ್ತೆ ಹಸಿವು ಹುಟ್ಟಿಸುತ್ತದೆ. ಹಾಗಾಗಿ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಇದರಿಂದ ದೂರವಿರುವುದು ಒಳ್ಳೆಯದು.