ಕೊರೊನಾಗಿಂತ ಮೊದಲು ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿರಲಿಲ್ಲ. ಕೊರೊನಾ ನಂತ್ರ ಜನರ ಆರೋಗ್ಯ ಕಾಳಜಿ ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ವಿಟಮಿನ್ ಸಿ ನೇರವಾಗುತ್ತದೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅತಿಯಾಗಿ ವಿಟಮಿನ್ ಸಿ ಸೇವನೆ ಅನುಕೂಲಕರವಲ್ಲ.
ವಿಟಮಿನ್ ಸಿ ಅತಿಯಾದ ಸೇವನೆಯಿಂದ ಅತಿಸಾರ ಉಂಟಾಗುತ್ತದೆ. ಹೊಟ್ಟೆ ಕೆಡುತ್ತದೆ. ವಾಂತಿ ಮತ್ತು ಅತಿಸಾರ ಹೆಚ್ಚಾಗಬಹುದು. ಈ ಸಮಸ್ಯೆಗಳು ಹೆಚ್ಚಾದರೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ.
ವಿಟಮಿನ್ ಸಿ ಅತಿಯಾದ ಸೇವನೆಯಿಂದ ಎದೆಯುರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎದೆಯ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಗಂಟಲಿನಲ್ಲಿ ಕಿರಿಕಿರಿಯುಂಟಾಗುತ್ತದೆ.
ವಿಟಮಿನ್ ಸಿ ಅತಿಯಾದ ಸೇವನೆಯಿಂದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುವುದುಂಟು. ಇಷ್ಟೇ ಅಲ್ಲ ನಿದ್ರಾಹೀನತೆ, ತಲೆನೋವು ಕಾಣಿಸಿಕೊಳ್ಳುತ್ತದೆ. ನಿದ್ರೆಯಲ್ಲಿ ಎಚ್ಚರವಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ರಾತ್ರಿ ನಿದ್ರೆಗೆ ಮೊದಲು ಇದನ್ನು ಸೇವಿಸಬೇಡಿ.
ತಜ್ಞರ ಪ್ರಕಾರ ಜನರು ಪ್ರತಿದಿನ 65-90 ಮಿಗ್ರಾಂ ವಿಟಮಿನ್-ಸಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ದಿನಕ್ಕೆ 2000 ಗ್ರಾಂ ವಿಟಮಿನ್-ಸಿ ಆರೋಗ್ಯಕ್ಕೆ ಅಪಾಯಕಾರಿ. ಉದಾಹರಣೆಗೆ, ಕಿತ್ತಳೆ ಸುಮಾರು 51 ಮಿಲಿಗ್ರಾಂ ವಿಟಮಿನ್-ಸಿ ಹೊಂದಿರುತ್ತದೆ. ಒಂದು ದಿನಕ್ಕೆ 2 ಕಿತ್ತಳೆ ಹಣ್ಣನ್ನು ಆರಾಮವಾಗಿ ತಿನ್ನಬಹುದು.