ಪುರುಷರು ಒರಟು ತ್ವಚೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಪುರುಷರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಾಗಾಗಿ ಈ ಮನೆಮದ್ದುಗಳನ್ನು ಬಳಸಿ.
*ರೋಸ್ ವಾಟರ್ : ಸೌತೆಕಾಯಿ ರಸದೊಂದಿಗೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಎಣ್ಣೆಯಂಶ ಕಡಿಮೆಯಾಗುತ್ತದೆ.
*ತಾಜಾ ಪುದೀನಾ ಎಲೆಗಳ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಲ್ಲಿ ವಾಶ್ ಮಾಡಿ. ಇದು ಮೊಡವೆಗಳ ಸಮಸ್ಯೆಯನ್ನು ದೂರಮಾಡುತ್ತದೆ.
*ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಕುದಿಸಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಮುಖ ತೊಳೆಯಿರಿ. ಇದರಿಂದ ಮುಖದಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತದೆ.
* ಮುಖಕ್ಕೆ ಶ್ರೀಗಂಧದ ಪೇಸ್ಟ್ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ.
*ಹಾಗೇ ಪ್ರತಿದಿನ 6ರಿಂದ 8 ಲೋಟ ನೀರು ಕುಡಿಯಿರಿ, ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಪ್ರತಿದಿನ ತಾಜಾ ಹಣ್ಣುಗಳು, ಸಲಾಡ್, ಮೊಳಕೆ ಕಾಳುಗಳು, ಧಾನ್ಯಗಳು ಮತ್ತು ಮೊಸರನ್ನು ಸೇವಿಸಿ.