ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸುತ್ತಾರೆ. ಸುಖ-ಆರೋಗ್ಯದ ಜೊತೆ ಸಮೃದ್ಧಿ ನೆಲೆಸಿರಲೆಂದು ಬಯಸುತ್ತಾರೆ. ಇದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಆದ್ರೆ ಕೆಲವರು ಎಷ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗಬಹುದು. ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದ್ರಿಂದ ವಾಸ್ತು ದೋಷ ಕಡಿಮೆಯಾಗುತ್ತದೆ.
ಹಿಂದೂ ಧರ್ಮದಲ್ಲಿ ಓಂ ಚಿಹ್ನೆಗೆ ಮಹತ್ವದ ಸ್ಥಾನವಿದೆ. ಮನೆಯಲ್ಲಿ ರೋಗವನ್ನು ಉತ್ಪಾದನೆ ಮಾಡುವ ಶಕ್ತಿಯನ್ನು ಇದು ತಗ್ಗಿಸುತ್ತದೆ. ಮನೆ ಮುಖ್ಯ ಬಾಗಿಲಿಗೆ ಅಥವಾ ಯಾವುದೇ ಸ್ಥಳದಲ್ಲಿ ಇದನ್ನು ಇಡಬೇಕು.
ಮಣ್ಣು, ಜೇಡಿ ಮಣ್ಣು, ತಾಮ್ರ, ಹಿತ್ತಾಳೆ, ಬೆಳ್ಳಿ ಅಥವಾ ಚಿನ್ನದಿಂದ ಮಾಡಿದ ಯಾವುದೇ ಪವಿತ್ರ ಲೋಹದ ಕಳಶವನ್ನು ಮನೆಯಲ್ಲಿ ಇಡಬೇಕು. ಅಶೋಕ ಅಥವಾ ಮಾವಿನ ಎಲೆಗಳ ಜೊತೆಗೆ ಈ ಕಳಶದ ಮೇಲೆ ಕೆಂಪು ದಾರವನ್ನು ಕಟ್ಟಬೇಕು. ಇದು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಕೆಂಪುದಾರದಿಂದ ಕಟ್ಟಿದ ಮೂರು ನಾಣ್ಯಗಳು ಶುಭಕರ. ಇದು ಮನೆಯಲ್ಲಿ ಸಂಪತ್ತಿನ ಆಗಮನದ ಜೊತೆ ಸಂಪತ್ತು ಮನೆಯಲ್ಲಿರಲು ನೆರವಾಗುತ್ತದೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೇತುಹಾಕಬೇಕು.
ಮನೆಯ ಮುಖ್ಯ ಗೇಟ್ ಅಥವಾ ಆಸುಪಾಸಿನ ಗೋಡೆಗೆ ಮಹಿಳೆಯರ ಹಸ್ತದ ಗುರುತನ್ನು ಹಾಕಬೇಕು. ಅರಿಶಿನದಿಂದ ಈ ಗುರುತು ಹಾಕಬೇಕು. ಇದು ನಕಾರಾತ್ಮಕ ಶಕ್ತಿಯನ್ನು ದೂರವಿಡುವ ಜೊತೆಗೆ ದೇವತೆಗಳನ್ನು ಆಕರ್ಷಿಸುತ್ತದೆ.
ಮೀನು ಸಮೃದ್ಧಿಯ ಸಂಕೇತ. ಮನೆಯಲ್ಲಿ ಬಂಗಾರದ ಮೀನನ್ನು ಇಡಬೇಕು. ಇದು ವಾಸ್ತುದೋಷವನ್ನು ಕಡಿಮೆ ಮಾಡುತ್ತದೆ.