alex Certify ಕುತ್ತಿಗೆ ನೋವು, ಭುಜದ ನೋವು ಸಮಸ್ಯೆ ನಿವಾರಣೆಗೆ ಪ್ರತಿದಿನ ಅಭ್ಯಾಸ ಮಾಡಿ ಈ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತ್ತಿಗೆ ನೋವು, ಭುಜದ ನೋವು ಸಮಸ್ಯೆ ನಿವಾರಣೆಗೆ ಪ್ರತಿದಿನ ಅಭ್ಯಾಸ ಮಾಡಿ ಈ ಯೋಗ

ಕೆಲವರು ಅತಿಯಾಗಿ ಕೆಲಸಗಳನ್ನು ಮಾಡುವುದರಿಂದ ಕುತ್ತಿಗೆ ನೋವು, ಭುಜದ ನೋವು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ನೋವುಗಳನ್ನು ನಿವಾರಿಸಲು ಎಣ್ಣೆಯ ಮಸಾಜ್ ಗಳ ಜೊತೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ.

*ಮತ್ಸ್ಯಾಸನ : ಚಾಪೆಯ ಮೇಲೆ ಕುಳಿತು ಬೆನ್ನಿನ ಮೇಲೆ ಮಲಗಿ ನಿಮ್ಮ ಮೊಣ ಕೈಯನ್ನು ನೆಲದ ಮೇಲೆ ಬಲವಾಗಿ ಇಟ್ಟು ನಿಮ್ಮ ತಲೆ ಮತ್ತು ಭುಜಗಳನ್ನು ಮೇಲೆತ್ತಬೇಕು. ತಲೆ ನೆಲದಿಂದ ದೂರವಿರಬೇಕು. ಕಾಲುಗಳನ್ನು ನೇರವಾಗಿಡಿ. ಈ ಭಂಗಿಯಲ್ಲಿ ನಿಧಾನವಾಗಿ ಉಸಿರಾಡಿ.

*ಭುಜಂಗಾಸನ : ಭುಜಗಳ ಕೆಳಗೆ ಅಂಗೈಗಳನ್ನು ಇಟ್ಟುಕೊಂಡು ನಿಮ್ಮ ಹೊಟ್ಟೆಯ ಮೇಲೆ ಮಲಗಿ. ಕಾಲ್ಬೆರಳುಗಳನ್ನು ನೆಲದ ಮೇಲೆ ಇಟ್ಟುಕೊಂಡು ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ. ಬಳಿಕ ನಿಮ್ಮ ತಲೆ ಮತ್ತು ಭುಜಗಳನ್ನು 30ಡಿಗ್ರಿ ಕೋನದಷ್ಟು ಮೇಲಕ್ಕೆತ್ತಿ. ಈ ಭಂಗಿಯಲ್ಲಿ 20 ಸೆಕೆಂಡುಗಳ ಕಾಲ ಉಸಿರಾಡಿ.

*ಸರ್ಪಾಸನ : ನಿಮ್ಮ ಹೊಟ್ಟೆಯ ಮೇಲೆ ಮಲಗಿ ಬೆನ್ನಿನ ಹಿಂದೆ ನಿಮ್ಮ ಕೈಗಳನ್ನು ಇಂಟರ್ ಲಾಕ್ ಮಾಡಿ ಕತ್ತನ್ನು ಮೇಲಕ್ಕೆತ್ತಿ. ಈ ಭಂಗಿಯಲ್ಲಿ 10 ಸೆಕೆಂಡುಗಳ ಕಾಲ ಉಸಿರಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...