
ನಮ್ಮ ಮುಖದ ಕಾಂತಿ ಚಂದ್ರನಂತೆ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಸಾಕಷ್ಟು ಬ್ಯೂಟಿ ಪ್ರಾಡೆಕ್ಟ್ ಗಳು ಮಾರುಕಟ್ಟೆಯಲ್ಲಿವೆ. ಆದರೆ ಒಬ್ಬೊಬ್ಬರ ತ್ವಚೆ ಒಂದೊಂದು ರೀತಿ ಆಗಿರುವುದರಿಂದ ಕೆಲವೊಮ್ಮೆ ಇವುಗಳಿಂದ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಮೊದಲಿನಿಂದಲೂ ಅನುಸರಿಸಿಕೊಂಡಿರುವ ಕೆಲವು ಫೇಸ್ ಪ್ಯಾಕ್ ಗಳನ್ನು ಹಚ್ಚುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.
ಅರಿಶಿನ ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲೆ, ಸುಕ್ಕು ರಹಿತ ಮುಖ ನಿಮ್ಮದಾಗಬೇಕೆಂದರೆ ಈ ವಿಧಾನ ಅನುಸರಿಸಿ ನೋಡಿ.
1 ಟೀ ಸ್ಪೂನ್ ಅರಿಶಿನ ತೆಗೆದುಕೊಂಡು ಅದಕ್ಕೆ 1 ಟೀ ಸ್ಪೂನ್ ಆ್ಯಪಲ್ ಸೈಡ್ ವಿನೇಗರ್, 1 ½ ಟೇಬಲ್ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹೆಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಅಂದ ಹೆಚ್ಚಾಗುತ್ತದೆ.