ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ನಿದ್ರೆಯ ಕೊರತೆ, ರಕ್ತಹೀನತೆಯ ಕಾರಣಗಳಿಂದ ಕಣ್ಣಿನ ಸುತ್ತಲೂ ಈ ಡಾರ್ಕ್ ಸರ್ಕಲ್ ಮೂಡುತ್ತದೆ. ಇದನ್ನು ನಿವಾರಿಸಲು ಬಾದಾಮಿ ಎಣ್ಣೆ ಬಳಸಿ. ಬಾದಾಮಿ ಎಣ್ಣೆಯಲ್ಲಿರುವ ಪೋಷಕಾಂಶ ನಿಮ್ಮ ಡಾರ್ಕ್ ಸರ್ಕಲ್ ನ್ನು ನಿವಾರಿಸಲು ಸಹಕಾರಿಯಾಗಿದೆ.
*ಬಾದಾಮಿ ಎಣ್ಣೆ ½ ಚಮಚ, ಜೇನುತುಪ್ಪ ½ ಚಮಚ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ. ಮರುದಿನ ವಾಶ್ ಮಾಡಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿ ಸುಕ್ಕುಗಳು ಮೂಡುವುದಿಲ್ಲ.
*ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ನಿವಾರಣೆಯಾಗಲು ಮೊದಲಿಗೆ ಹತ್ತಿಯ ಉಂಡೆಗಳ ಸಹಾಯದಿಂದ ರೋಸ್ ವಾಟರ್ ಹಚ್ಚಿ ಒಣಗಲು ಬಿಡಿ ಬಳಿಕ ಬಾದಾಮಿ ಎಣ್ಣೆಯಿಂದ 2 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಡಿ.
* ಆಲಿವ್ ಆಯಿಲ್ ½ ಚಮಚ ಮತ್ತು ½ ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕಣ್ಣಿನ ಸುತ್ತಲೂ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಕಣ್ಣಿನ ಸುತ್ತಲಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.