ಮರೆಗುಳಿತನ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯೇ? ಬೆಳಿಗ್ಗೆ ನೆನಪಿದ್ದದ್ದು ಈಗ ಮರೆತು ಹೋಗಿದೆಯೇ? ಹಾಗಿದ್ದರೆ ನೀವು ಅವಶ್ಯಕವಾಗಿ ಈ ಕೆಳಗಿನ ಆಹಾರಗಳನ್ನು ನಿಮ್ಮ ನಿತ್ಯದ ಊಟದಲ್ಲಿ ಸೇರಿಸಿಕೊಳ್ಳಬೇಕು.
ಅವಕಾಡೊ ಹಣ್ಣು ಮೆದುಳಿನ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇವು ಮೆದುಳಿಗೆ ರಕ್ತ ಪೂರೈಕೆ ಮಾಡುತ್ತದೆ ಮತ್ತು ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದ ನಿಮ್ಮ ನೆನಪಿನ ಶಕ್ತಿ ಸಹಜವಾಗಿಯೇ ಏರಿಕೆಯಾಗುತ್ತದೆ.
ವಾಲ್ ನಟ್ ಹಾಗೂ ಬಾದಾಮಿ ಬೀಜಗಳನ್ನು ತಿನ್ನುವುದರಿಂದ ನಿಮ್ಮ ಮನಸ್ಥಿತಿ ಸ್ಥಿರವಾಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಲ್ ನಟ್ ನಲ್ಲಿರುವ ಒಮೆಗಾ 3, ಕೊಬ್ಬಿನಾಮ್ಲ ವಯಸ್ಕರ ನೆನಪಿನ ಶಕ್ತಿಯನ್ನೂ ವೃದ್ಧಿಸುತ್ತದೆ.
ಪಾಲಕ್ ಸೊಪ್ಪಿನ ಸೇವನೆಯಿಂದಲೂ ನೆನಪಿನ ಶಕ್ತಿ ಹೆಚ್ಚುತ್ತದೆ. ಇವುಗಳಲ್ಲಿರುವ ಕಬ್ಬಿಣಾಂಶ, ವಿಟಮಿನ್ ಇ ಮತ್ತು ಕೆ ಅಂಶಗಳು ದೇಹಕ್ಕೆ ಪೋಷಕಾಂಶ ನೀಡುತ್ತವೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ.