ಚಳಿಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಕಾಡುವಂತಹ ಸಾಮಾನ್ಯ ಕಾಯಿಲೆಗಳಿಂದ ದೂರವಿರಲು ಶುಂಠಿ ತುಂಬಾ ಸಹಕಾರಿ. ಹಾಗಾಗಿ ಹಾಲಿಗೆ ಶುಂಠಿ ಮಿಕ್ಸ್ ಮಾಡಿ ಸೇವಿಸಿ.
ಶುಂಠಿಯಲ್ಲಿ ಉರಿಯೂತ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ಶೀತ, ಜ್ವರ, ಕೆಮ್ಮು, ಅಜೀರ್ಣ, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗಾಗಿ 1 ಕಪ್ ಹಾಲಿಗೆ 1 ಚಮಚ ತುರಿದ ಶುಂಠಿ, 1 ಚಿಟಿಕೆ ಮೆಣಸಿನಕಾಳಿನ ಪುಡಿ, 1 ಚಿಟಿಕೆ ದಾಲ್ಚಿನ್ನಿ, ಬೆಲ್ಲದ ಪುಡಿ ಸೇರಿಸಿ 3 ನಿಮಿಷ ಕುದಿಸಿ ಸೇವಿಸಿ. ಇದು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ನಿಮ್ಮನ್ನ ಆರೋಗ್ಯವಾಗಿಡುತ್ತದೆ.