ವಾಲ್ ನಟ್ಸ್ ಅನೇಕ ಪೋಷಕಾಂಶಗಳನ್ನು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
*2 ಚಮಚ ವಾಲ್ ನಟ್ಸ್ ಪುಡಿಗೆ 1 ಚಮಚ ಜೇನುತುಪ್ಪ, ರೋಸ್ ವಾಟರ್ ಕೆಲವು ಹನಿಗಳನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಕಲೆರಹಿತ ಹಾಗೂ ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.
*1 ಚಮಚ ವಾಲ್ ನಟ್ಸ್ ಪುಡಿಗೆ 1 ಚಮಚ ಪಪ್ಪಾಯದ ತಿರುಳು ಮತ್ತು 1 ಚಮಚ ಅರಶಿನವನ್ನು ಮಿಕ್ಸ್ ಮಾಡಿ ನಯವಾದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಬಳಿಕ ಮಾಯಿಶ್ಚರೈಸರ್ ಕ್ರಿಂ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಇದನ್ನು ವಾರಕ್ಕೊಮ್ಮೆಯಾದರೂ ಬಳಸಿ.