ಕೆಲವರ ಬೆರಳಿನ ತುದಿಯಲ್ಲಿ ಚರ್ಮದ ಸಿಪ್ಪೆ ಸುಲಿದಿರುತ್ತದೆ. ಇದು ತುಂಬಾ ಕಿರಿ ಕಿರಿ ಮತ್ತು ನೋವಿನಿಂದ ಕೂಡಿರುತ್ತದೆ. ಈ ಸಮಸ್ಯೆ ಹಲವು ಕಾರಣಗಳಿಂದ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸುವ ಪರಿಹಾರಗಳನ್ನು ತಿಳಿದುಕೊಳ್ಳಿ.
-ಅತಿಯಾಗಿ ಕೈ ತೊಳೆಯುವುದರಿಂದ ಚರ್ಮದ ತೇವಾಂಶ ಕಳೆದುಕೊಂಡು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಉಂಟಾಗಿ ಬೆರಳುಗಳ ತುದಿಯಲ್ಲಿ ಸಿಪ್ಪೆ ಏಳುತ್ತದೆ. ಹಾಗಾಗಿ ಆಗಾಗ ಕೈ ತೊಳೆಯಬೇಡಿ, ಹಾಗೇ ಕೈ ತೊಳೆದಾಗ ಎಣ್ಣೆ ಹಚ್ಚಿಕೊಳ್ಳಿ.
-ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಕೈಗಳನ್ನು ಒಡ್ಡಿಕೊಳ್ಳಬೇಡಿ. ಇದರಿಂದ ಕೂಡ ಚರ್ಮ ಡ್ರೈ ಆಗಿ ಸಿಪ್ಪೆ ಸುಲಿಯುತ್ತದೆ. ಹೊರಗಡೆ ಹೋಗುವಾಗ ಅಲೋವೆರಾ ಜೆಲ್ ಹಚ್ಚಿ.
-ಕೃಷಿ ಕೆಲಸ ಮಾಡುವವರು ಕೈಗಳ ಚರ್ಮಕ್ಕೆ ಹಾನಿಕಾರಕ ರಾಸಾಯನಿಕಗಳು ತಗಲುವುದರಿಂದ ಚರ್ಮದ ಸಿಪ್ಪೆ ಏಳುತ್ತದೆ. ಹಾಗಾಗಿ ಈ ಕೆಲಸ ಮಾಡುವವರು ಕೈಗಳಿಗೆ ಗ್ಲೌಸ್ ಧರಿಸಿ ಮತ್ತು ಕೈಗಳನ್ನು ವಾಶ್ ಮಾಡಿ ಕೊಬ್ಬರಿ ಎಣ್ಣೆ ಹಚ್ಚಿ.
-ಬೆರಳುಗಳನ್ನು ಚೀಪುವುದರಿಂದ ಮತ್ತು ಕೆಲವರು ಒತ್ತಡಕ್ಕೆ ಸಿಲುಕಿ ಬೆರಳುಗಳನ್ನು ಕಚ್ಚುವುದರಿಂದ ಸಿಪ್ಪೆ ಸುಲಿಯುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಬಿಟ್ಟು ಬಿಡಿ.