alex Certify ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ ದಾಳಿಂಬೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ ದಾಳಿಂಬೆ….?

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಪೊಟ್ಯಾಶಿಯಂ ಪೋಷಕಾಂಶವಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಗರ್ಭಿಣಿಯರು ಪ್ರತಿದಿನ ಸೇವಿಸಬಹುದೇ? ಎಂಬ ಗೊಂದಲವಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

ದಾಳಿಂಬೆ ಹಣ್ಣು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು ಹಾಗೂ ಗರ್ಭಿಣಿಯಾಗಲು ಪ್ರಯತ್ನಿಸುವವರಿಗೆ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ತಿನ್ನುವುದರಿಂದ ಗರ್ಭಾಶಯಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ, ಮತ್ತು ಗರ್ಭಾಶಯದ ಒಳಪದರವು ದಪ್ಪವಾಗುತ್ತದೆ. ಇದರಿಂದ ಗರ್ಭಪಾತದ ಅಪಾಯ ಕಡಿಮೆಯಾಗುತ್ತದೆ.

ಇದಲ್ಲದೇ ದಾಳಿಂಬೆಗಳಲ್ಲಿರುವ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಸಿಡ್ ಪೋಷಕಾಂಶಗಳು ಭ್ರೂಣದ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೇ ಮಹಿಳೆಯರು ಬೇಗ ಗರ್ಭಧರಿಸಲು ತಾಜಾ ದಾಳಿಂಬೆ ರಸವನ್ನು ಪ್ರತಿದಿನ ಒಂದು ಕಪ್ ಕುಡಿದರೆ ಉತ್ತಮ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...