ಹಿಂದೂ ಧರ್ಮದಲ್ಲಿ ಒಂದೊಂದು ವಾರದಂದು ಒಂದೊಂದು ದೇವರನ್ನು ಆರಾಧನೆ ಮಾಡುತ್ತೇವೆ. ಹಾಗಾಗಿ ಶನಿವಾರದಂದು ಶನಿದೇವನನ್ನು ಹಾಗೂ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಹಾಗಾಗಿ ಶನಿದೋಷ ನಿವಾರಣೆಯಾಗಲು ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಬೇಕಾಗುತ್ತದೆ.
ಶನಿದೇವನನ್ನು ಯಾರೂ ಮನೆಯಲ್ಲಿ ಪೂಜಿಸುವುದಿಲ್ಲ. ಹಾಗಾಗಿ ಶನಿವಾರದಂದು ಶನಿಗೆ ಪ್ರಿಯವಾದ ವಸ್ತುಗಳನ್ನು, ಚಪ್ಪಲಿ, ಬೂಟ್, ಬ್ಯಾಗ್ ಗಳನ್ನು ಮನೆಗೆ ತರಬಾರದು. ಹಾಗೂ ಕಬ್ಬಿಣಕ್ಕೆ ಸಂಬಂಧಪಟ್ಟಂತ ವಸ್ತುಗಳು, ಅಕ್ಕಿ, ತೈಲ, ಎಳ್ಳು, ಎಳ್ಳು ಎಣ್ಣೆಯನ್ನು ಮನೆಗೆ ತರಬಾರದು. ಇದರಿಂದ ಶನಿ ನಮ್ಮ ಮನೆಗೆ ಬರುತ್ತಾನೆ ಎಂದು ಹೇಳುತ್ತಾರೆ. ಇದರಿಂದ ಸಂಕಷ್ಟಗಳು ಕಾಡುತ್ತವೆ.
ಒಂದು ವೇಳೆ ನಿಮಗೆ ಶನಿದೋಷ ಕಾಡುತ್ತಿದ್ದರೆ ವೆಂಕಟೇಶ್ವರ ಸ್ವಾಮಿಗೆ 7 ಶನಿವಾರ ಅಕ್ಕಿ, ಬೆಲ್ಲ, ಎಳ್ಳು ಮಿಶ್ರಿತ ತಂಬಿಟ್ಟಿನಿಂದ ದೀಪಾರಾಧನೆ ಮಾಡಿ ಬಾಳೆಹಣ್ಣನ್ನು ನೈವೇದ್ಯವಾಗಿ ಇಡಿ. ಇದರಿಂದ ಶನಿ ದೋಷ ಕಳೆಯುತ್ತದೆ.